

ಉತ್ತರಪ್ರದೇಶ: ದೆವ್ವ ಬಿಡಿಸುವುದಾಗಿ ಹೇಳಿ ದುಷ್ಕರ್ಮಿಯೊಬ್ಬ ಯುಪತಿ(18) ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಮಿರ್ಜಾಪುರದಿಂದ ಸೀತಾಮರ್ಹಿಗೆ ಬಂದಿದ್ದ ಕುಟುಂಬವೊಂದಕ್ಕೆ ಮೋತಿಲಾಲ್ (52) ಎಂಬಾತ ತನ್ನನ್ನು ತಾಂತ್ರಿಕ ಎಂದು ಷರಿಚಯಿಸಿಕೊಂಡಿದ್ದಾನೆ. ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಭೂತೋಚ್ಚಾಟನೆಯ ಮೂಲಕ ಆಕೆಯ ದೇಹದಿಂದ ಪ್ರೇತವನ್ನು ಓಡಿಸಬಹುದೆಂದು ಯುವತಿಯ ಪೋಷಕರನ್ನು ನಂಬಿಸಿದ್ದಾನೆ. ಅವರಿಂದ 4,000 ರೂ. ಪಡೆದು ಮೋತಿಲಾಲ್ ಆಕೆಯನ್ನು ಬೈಕಿನಲ್ಲಿ ದರ್ವಸಿ ಗ್ರಾಮದ ದೇವಸ್ಥಾನದ ಹಿಂದಿನ ಕೋಣೆಗೆ ಕರೆದೊಯ್ದು ಅಲ್ಲಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮೂರು ಗಂಟೆಗಳ ಸಂತರ ಮೋತಿಲಾಲ್ ಯುವತಿಯನ್ನು ಬಿಟ್ಟು, ಮರುದಿನ ಮತ್ತೆ ತನ್ನನ್ನು ಭೇಟಿ ಮಾಡಲು ಹೇಳಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಸಂತ್ರಸ್ತೆ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಆಕೆಯ ತಂದೆ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಮೋತಿಲಾಲ್ನನ್ನು ಬಂಧಿಸಲಾಗಿದೆ.