JANANUDI.COM NETWORK
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಆಪತ್ಭಾಂಧವ ಎಂದೇ ಕರೆಯಲ್ಪಡುವ ಆಸೀಫ್ ನಡೆಸುತ್ತಿರುವ ಪ್ರತಿಭಟನೆ 7 ನೇ ದಿನಕ್ಕೆ ಕಾಲಿಟ್ಟಿದೆ.
ದಿನಾಲು ವಿವಿಧ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಸಿಫ್ ಇಂದು ತನ್ನ ದೇಹಕ್ಕೆ ಕಬ್ಬಿಣದ ಸರಪಳಿಯನ್ನು ಕಟ್ಟಿಕೊಂಡು 2 ಗಂಟೆಗಳ ಕಾಲ ಕಂಬಕ್ಕೆ ಕಟ್ಟಿಕೊಂಡಿದ್ದ ಆಸಿಫ್ ಅವರ ಆರೋಗ್ಯ ಬಿಸಿಲಿನಿಂದ ಹದಗೆಟ್ಟಿದ್ದು, ಸುರತ್ಕಲ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರೂ ಆಸೀಫ್ ಚಿಕಿತ್ಸೆ ನಿರಾಕರಿಸಿದ್ದಾರೆ. ಟೋಲ್ ಗೇಟ್ ಮುಚ್ಚುವವರೆಗೂ ನಾನು ಕದಲೋದಿಲ್ಲ, ಜಿಲ್ಲಾಧಿಕಾರಿ ನನ್ನ ಮನವಿಯನ್ನು ಸ್ವೀಕರಿಸಬೇಕು ಎಂದು ಆಸೀಫ್ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡರೂ, ಸುರತ್ಕಲ್ ಟೋಲ್ ಬಂದ್ ಮಾಡಲಿಲ್ಲ. ಟೋಲ್ ಗೇಟ್ ಸ್ಥಗಿತಗೊಳಿಸುವ ಬದಲು ಜನರನ್ನು ಲೂಟಿ ಮಾಡುವುದಕ್ಕಾಗಿಯೇ ಎರಡು ತಿಂಗಳ ಹಿಂದೆ ಮತ್ತೆ ಮೂರು ತಿಂಗಳ ಮಟ್ಟಿಗೆ ಲೈಸನ್ಸ್ ನವೀಕರಣ ಮಾಡಲಾಗಿತ್ತು ಎಂದು ಜನರ ಅಂಬೋಣ. ಒಂದು ಟೋಲ್ ಗೇಟ್ನಿಂದ ಮತ್ತೊಂದು ಟೋಲ್ ಗೇಟಿಗೇ ಇಂತಿಷ್ಟು ಅಂತರ ಇಡಬೇಕೆಂಬ ನಿಯಮವಿದೆ. ಈಗ 15 ಕಿಮೀ ನಡುವೆ ಎರಡೆರಡು ಕಡೆ ಟೋಲ್ ಕಟ್ಟುವ ಸ್ಥಿತಿ ವಾಹನ ಕಾಲಕರಾಗಿದೆ. ಜನರನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಶಾಸಕರು, ಸಂಸದರ ಕೃಪೆಯಿಂದಲೇ ಈ ರೀತಿಯ ಲೂಟಿ ನಡೆಯುತ್ತಿದೆ ಅನ್ನುವ ಗಂಭೀರ ಆರೋಪ ಇದ್ದರೂ, ಜನಪ್ರತಿನಿಧಿಗಳು ಮೌನವಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಅದಕ್ಕೆ ಟೋಲ್ ವಿರೋಧಿಸಿ ವಿಶಿಷ್ಟ ರೀತಿಯ ಅಸಿಫ್ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಜನ ಸಾಮಾಜ ಘಾತುಕ ಸಮಸ್ಯೆಗಳಿಗೆ ಬೆಂಬಲಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುವ ಈ ಸಮಯದಲ್ಲಿ ಜನತೆಯ ಒಳ್ಳೆದಾಗಲಿ ಎಂದು ಪ್ರತಿಭಟಿಸುವ ಅಸಿಫ್ ಪ್ರತಿಭಟನೆಗೆ ಸಹಾಕಾರ ನೀಡಬೇಕು.