

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕು ಬರಗಾಲದ ಪಟ್ಟಿಯಲ್ಲಿ ಇದ್ದು ಇದರ ಹಿನ್ನೆಲೆಯಲ್ಲಿ ತಾಲೂಕಿನ ರೈತರಿಗೂ ಸಹ ಸರ್ಕಾರವು ನೀಡಲಿರುವ ಬರಪರಿಹಾರಕ್ಕಾಗಿ ಹಣ ಬಿಡುಗಡೆಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಹೇಳಿದರು.
ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಗೆ ಬುಧವಾರ ಬೇಟಿ ನೀಡಿ ವಿವಿಧ ದಾಖಲೆಗಳ ಬಗ್ಗೆ ಚರ್ಚೆ ನೆಡೆಸಿ ಮಾತನಾಡಿದರು.
ಅದಕ್ಕೆ ದಾಖಲೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಅಲ್ಲದೆ ಆಧಾರ್ ಫೀಡಿಂಗ್ ಲ್ಯಾಂಡ್ ಬೀಟ್ ಆಪ್ ಕುರಿತು ಪ್ರಗತಿ ಪರಿಶೀಲಿಸಿಲಾಗಿದೆ ಎಂದರು ಹಾಗೂ ಕಂದಾಯ ಇಲಾಖೆ ವಿಷಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಎನ್ ಸುದೀಂದ್ರ, ಶಿರಸ್ತೆದಾರ್. ವಿಶ್ವನಾಥ್ ನಾಯಕ್, ಎಸ್ ಡಿ ಎ. ಎಚ್.ಎಸ್. ಅಭಿμÉೀಕ್, ಸಿಬ್ಬಂದಿ ನಿರ್ಮಲ ಇದ್ದರು .