ಸೆಪ್ಟೆಂಬರ್ 11, ಕುಂದಾಪುರ: ಇಲ್ಲಿನ ಡಾ .ಬಿ .ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಜೆಸಿಐ ಕುಂದಾಪುರ ಸಿಟಿ ಅವರ ಜೆಸಿ ಸಪ್ತಾಹದ ಭಾಗವಾಗಿ ತರಬೇತಿ ಕಾರ್ಯಕ್ರಮ ಸೆಪ್ಟೆಂಬರ್ 9 ರಂದು ಉದ್ಘಾಟನೆ ನಡೆಯಿತು.
ಜೆಸಿ ಲೋಕೇಶ್ ರೈ, JAC ಚೇರ್ಮನ್ ವಲಯ 15 ಇವರು ಕಾರ್ಯಕ್ರಮನ ಉದ್ಘಾಟಿಸಿ, ಜೆಸಿಐ ಕುಂದಾಪುರ ಸಿಟಿ ಅವರು ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಯುವ ಮನಸ್ಸುಗಳನ್ನು ತಲುಪುವ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಆಶಯ ನುಡಿಗಳನ್ನು ಆಡಿದರು. ಮುಖ್ಯ ಅತಿಥಿ ಐವನ್ ಅಲ್ಮೆಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಜೆಸಿ ರಾಘವೇಂದ್ರ ಚರಣ ನಾವಡ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಸಾಧಕ -ಬಾಧಕಗಳ ಕುರಿತು ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜೆಸಿ ಕುಂದಾಪುರ ಸಿಟಿಯ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ನಿಕಟಪೂರ್ವ ಅಧ್ಯಕ್ಷರಾದ ಡಾ .ಸೋನಿ ಡಿಕೋಸ್ಟ, ಸಪ್ತಾಹದ ಸಭಾಪತಿ ರಾಜು ಪೂಜಾರಿ ಮೂಡ್ಲು ಕಟ್ಟೆ, ಕಾರ್ಯಕ್ರಮದ ಸಂಯೋಜಕ ಜೆಸಿ ಜಗದೀಶ್ ಶೆಟ್ಟಿ, ಲೇಡಿ ಜೆಸಿ ಚೇರ್ಮನ್ ರೇಷ್ಮಾ ಕೋಟ್ಯಾನ್ ಉಪಸ್ಥಿತರಿದ್ದರು .
ಉಪ ಪ್ರಾಂಶುಪಾಲ ಡಾ .ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು, ಯುವ ಜೇಸಿ ಚೇರ್ಮನ್ ಕಿರಣ್ ಕುಮಾರ್ ಎನ್ ವಂದಿಸಿ, ಕಾಲೇಜಿನ ಎನ್.ಎಸ್.ಎಸ್ ಘಟಕ ಎರಡರ ಕಾರ್ಯಕ್ರಮ ಅಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು
ಈ ಮೊದಲು ದಾನಿ ಐವನ್ ಅಲ್ಮೆಡ ಅವರನ್ನು ಸನ್ಮಾನಿಸಲಾಯಿತು.