ಶ್ರೀನಿವಾಸಪುರ: ಶಿಕ್ಷಕರ ಜೀವ ಇರುವ ತನಕ ಎಲ್ಲಿ ಕಾಣಿಸಿದರೂ ನಮಗೆ ನಮಸ್ಕಾರ ಎಂದು ಹೇಳುವ ವೃತ್ತಿಎಂದರೆ ನಮ್ಮ ಶಿಕ್ಷಕ ವೃತ್ತಿ ಮಾತ್ರ, ಒಬ್ಬಇಂಜಿನಿಯರ್ ನೀಡುವ ಪ್ಲಾನ್ನಂತೆಕಟ್ಟಡಕಟ್ಟಿದರೆ ಬೀಳಬಹುದು, ಆದರೆಒಬ್ಬ ಶಿಕ್ಷಕ ವಿದ್ಯಾರ್ಥಿಗೆ ವಿಧ್ಯೆಯನ್ನು ನೀಡಿದರೆಆದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲಎಂದು ಸಾಕ್ಷರತಾ ನಿರ್ದೇಶಕಿಯಾದ ಲಕ್ಷ್ಮೀ ಪ್ರಸನ್ನ ತಿಳಿಸಿದರು.
ಕೋಲಾರದಸ್ಕೌಟ್ಸ್ ಭವನದಲ್ಲಿ3191ಕೋಲಾರಜೋನ್ನ 12 ರೋಟರಿಕ್ಲಬ್ ಗಳೊಂದಿಗೆ ಗುರು ಶ್ರೇಷ್ಟ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ 121 ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಲಕ್ಷ್ಮೀ ಪ್ರಸನ್ನ, ಎಷ್ಟೋ ಜನಇಂಜಿನಿಯರ್ಸ್, ವೈಧ್ಯರನ್ನ, ಉದ್ಯೋಗಸ್ಥರನ್ನುತಯಾರು ಮಾಡುವಂತಹ ಶಿಕ್ಷಕ ವೃತ್ತಿಗೆರೋಟರಿ ಸಂಸ್ಥೆಯಿಂದಇಷ್ಟೊಂದು ಶಿಕ್ಷಕರಿಗೆ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆಅಭಾರಿಯಾಗಿದ್ದೇನೆಎಂದರು.
ಜಿಲ್ಲಾಪಾಲಕರಾದ ಸತೀಶ ಮಾಧವನ್ ಮಾತನಾಡಿ, ಈ ಜೋನ್ ನ 121 ಶಿಕ್ಷಕರಿಗೆ ಗುರು ಶ್ರೇಷ್ಟ ಪ್ರಶಸ್ತಿ ಸನ್ಮಾನಕಾರ್ಯಕ್ರಮವನ್ನುರೋಟರಿ ಸಂಸ್ಥೆಯಿಂದಹಮ್ಮಿಕೊಂಡಿರುವುದು ನಮ್ಮ ಭಾಗ್ಯಎಂದರು.
ಶ್ರೀನಿವಾಸಪುರತಾಲ್ಲೂಕಿನ 10 ಶಿಕ್ಷಕರಿಗೆ ಸನ್ಮಾನ
ಶ್ರೀನಿವಾಸಪುರತಾಲ್ಲೂಕಿನ ಹನುಮಂತಪ್ಪಎನ್ಎ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಪುರ, ಮಧುಕುಮಾರ್ಜಿ.ಎಲ್.ಪಿ.ಎಸ್. ಕೊತ್ತಪಲ್ಲಿ, ಮಂಜುನಾಥ್ಹೆಚ್.ಪಿ.ಎಸ್. ಕೊಪ್ಪವಾರಿಪಲ್ಲಿ, ಶ್ರೀಮತಿ ಅನಿತಜಿ.ಎಲ್.ಪಿ.ಎಸ್. ಗೊಟ್ಟಿಕುಂಟೆ, ಶೋಭಾ ಡಿ.ವಿ. ಜಿ.ಎಲ್.ಪಿ.ಎಸ್. ಬೈರಪ್ಪಲ್ಲಿ, ಬಾಲಕೃಷ್ಣರಾವ್ಸರ್ಕಾರಿ ಪ್ರೌಢ ಶಾಲೆ, ನಂಬಿಹಳ್ಳಿ, ಮಂಜುನಾಥ್ದೇವೇಗೌಡನ್ಯಾಷನಲ್ ಹೈಸ್ಕೂಲ್ಯಲ್ದೂರು, ಚೆನ್ನಕೇಶವ ಸರ್ಕಾರಿ ಪ್ರೌಢಶಾಲೆ, ಮುತ್ತಕಪಲ್ಲಿ, ಗಿರೀಶ್ಎಮ್.ಜಿ.ಸರ್ಕಾರಿ ಪದವಿ ಪೂರ್ವಕಾಲೇಜು, ರಾಯಲ್ಪಾಡುಇವರಿಗೆಗುರು ಶ್ರೇಷ್ಟ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿಆರ್.ಐ. ಜೋನ್ನ ಅನೇಕ ಹಿರಿಯರೋಟರಿ ಸದಸ್ಯರು, ಜಿಲ್ಲಾ ಕಾರ್ಯದರ್ಶಿ ಎಸ್.ವಿ. ಸುಧಾಕರ್, ಲಕ್ಷ್ಮೀ ಪ್ರಸನ್ನ, ಅ.ಮು. ಲಕ್ಷ್ಮೀನಾರಾಯಣ್, ಜೋನ್ಗೌರ್ನರ್ರಾಜ್ಕುಮಾರ್, ಶಿವಮೂರ್ತಿ ಎಸ್. ಮೌನಿ, ಪ್ರಸನ್ನ, ರವೀಂದ್ರನಾಥ್,12 ಜಿಲ್ಲಾ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಶಿಕ್ಷಕರಕುಟುಂಬವರ್ಗದವರು ಭಾಗವಹಿಸಿದ್ದರು.
ಇದೆ ಸಮಯದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ ಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಹಿರಿಯ ಸದಸ್ಯರಾದರಾಜೇಂದ್ರಪ್ರಸಾದ್, ಕುಲಕರ್ಣಿ, ಹೆಚ್.ಎನ್ ನಾಗೇಶ್, ಅಶೋಕ್, ಸುರೇಶ್ ಕುಮಾರ್ ಸೇರಿದಂತೆಅನೇಕರು ಸದಸ್ಯರು ಭಾಗವಹಿಸಿದ್ದರು.