ನವದೆಹಲಿ: ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಆಯ್ಕೆಯಾಗಿದ್ದು ಮೂರು ಸುತ್ತಿನ ಮತ ಎಣಿಕೆಯ ನಂತರ ದ್ರೌಪದಿ ಮೂರನೇ ಎರಡರಷ್ಟು ಸ್ಪಷ್ಟ ಬಹುಮತದೊಂದಿಗೆ ಗೆದ್ದರು.ಇವರು ಬುಡಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿಯಾಗಲಿರುವ ಹೆಗ್ಗಳಿಕೆ ಇವರದು. ದ್ರೌಪದಿ ಮುರ್ಮು ಮತಗಳ ಲೆಕ್ಕದಲ್ಲಿ ಸಂಪೂರ್ಣ ಬಹುಮತವನ್ನು ದಾಟಿದರು.
ಮೂರು ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮುರ್ಮು ಇವರ ಮತ ಮೌಲ್ಯ 5,77,777 ಆಗಿತ್ತು. ವಿರೋಧ ಪಕ್ಷದಲ್ಲಿದ್ದ 17 ಸಂಸದರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದರು. ದ್ರೌಪದಿ ಮುರ್ಮು ಅವರ ಚುನಾವಣಾ ಗೆಲುವಿಗೆ ಯಶವಂತ್ ಸಿನ್ಹಾ ಅಭಿನಂದನೆ ಸಲ್ಲಿಸಿದ್ದಾರೆ.
ಮೊದಲ ಸುತ್ತಿನ ಎಣಿಕೆಯ ನಂತರ, ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರ ಮತಗಳನ್ನು ಎಣಿಸಿದಾಗ, 748 ಮತಗಳಲ್ಲಿ 540 ಮತಗಳನ್ನು ಮುರ್ಮು ಮುನ್ನಡೆ ಸಾಧಿಸಿದ್ದರು.
ಎರಡನೇ ಸುತ್ತಿನಲ್ಲಿ ಮುರ್ಮು ಅವರು 1,05,299 ಮತ ಎಣಿಕೆಯೊಂದಿಗೆ 10 ರಾಜ್ಯಗಳ ಒಟ್ಟು 1138 ಶಾಸಕರ ಪೈಕಿ 809 ಶಾಸಕರ ಮತಗಳನ್ನು ಪಡೆದರೆ, ಸಿನ್ಹಾ 44,276 ಮತ ಮೌಲ್ಯದೊಂದಿಗೆ 329 ಶಾಸಕರ ಮತಗಳನ್ನು ಮಾತ್ರ ಪಡೆದರು.
ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಒಟ್ಟು 5,23,600 ಮತಗಳನ್ನು ಪಡೆದಿದ್ದಾರೆ. ಮೊದಲ ಸುತ್ತಿನ ಎಣಿಕೆಯ ನಂತರ ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು 208 ಸಂಸದರ ಮತಗಳನ್ನು ಪಡೆದಿದ್ದು, ಅವರ ಒಟ್ಟು ಮತಗಳ ಮೌಲ್ಯ 1,45,600. ಶೇಕಡಾ 72.9 ಸಂಸದರ ಮತ ಮುರ್ಮು ಅವರ ಪರ ಬಿದ್ದರೆ, ಶೇಕಡಾ 27.81 ರಷ್ಟು ಮತವನ್ನು ಮಾತ್ರ ಸಿನ್ಹಾ ಪಡೆದುಕೊಂಡಿದ್ದಾರೆ ಸೋಮವಾರ ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.