

ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡಾಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅನುವಂಶಿಕ ಆಡಳಿತ ಮೊಕ್ತೇಸರರನ್ನಾಗಿ ಹಿರಿಯ ಕ್ರೃಷಿಕೋದ್ಯಮಿ ಅರುಣಕುಮಾರ್ ಶೆಟ್ಟಿಯವರನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಘೋಷಿಸಿ ಆದೇಶಿಸಿದೆ. ಇವರು ಕಳೆದ ಐದು ದಶಕಗಳಿಂದ ಈ ದೇವಾಲಯದ ಆಡಳಿತ ವ್ಯವಸ್ಥೆ ನೋಡಿಕೊಂಡು ಬರುತ್ತಿದ್ದರು.