

ಶ್ರೀನಿವಾಸಪುರ 1 : ಗ್ರಾಮೀಣ ಭಾಗದಲ್ಲಿನ ಕಲಾವಿದರು ಪುರಾತನ ಕಲೆಗಳಿಗೆ ಜೀವ ತುಂಬಿ ಬೆಳಸುತ್ತಿದ್ದಾರೆ ಎಂದು ಹಿರಿಯ ಕಲಾವಿದ ಪಿ.ಮುನಿರೆಡ್ಡಿ ಹೇಳಿದರು.
ತಾಲೂಕಿನ ಆರಮಾಕನ ಶೆಟ್ಟಿಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೋಲಾರ. ಸಂಯುಕ್ತಾಶ್ರಯದಲ್ಲಿ ಗಿರಿಜನ ಯೋಜನೆಯಡಿ ಗ್ರಾಮದ ಶ್ರೀ ವಾಲ್ಮೀಕಿ ಸಂಘದ ವತಿಯಿಂದ ಜಾನಪದ ಗೀತೆ, ತತ್ವಪದಗಳ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಾಟ್ಸ್‍ಪ್, ಫೇಸ್‍ಬುಕ್ ಹಾಗು ಟಿವಿ ಸೀರಿಯಲ್ ಗಳ ಮಧ್ಯೆ ಜಾನಪದ, ತತ್ವಪದಗಳ ಪುರಾತನ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಲಾವಿದರಿಗೆ ಕನ್ನಡ ಸಂಸ್ಕøತಿ ಇಲಾಖೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಬಣ್ಣಸಿದರು.
ಕಲಾವಿದರಾದ ಯಲವಂಕಟೆ ಎನ್.ವೆಂಕಟಸ್ವಾಮಿ, ಗೋಪಾಲರೆಡ್ಡಿ, ಅಶ್ವತರೆಡ್ಡಿ, ಅಕ್ಕುಲಪ್ಪ, ಮುನಿರಡ್ಡಿ, ಗ್ರಾ.ಪಂ.ಸದಸ್ಯರಾದ ವೆಂಕಟಸ್ವಾಮಿ, ಎಸ್.ವಿ.ನರಸಿಂಹಪ್ಪ ಇತರರು ಇದ್ದರು.