ಗೋಣಮಾಕನಹಳ್ಳಿ ಕೊಲೆ ಕೇಸಿನಲ್ಲಿ ಮೂವರು ಆರೋಪಿಗಳ ಬಂಧನ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೆಜಿಎಫ್ : ಕೆಜಿಎಫ್ ಪೊಲೀಸ್‌ ಜಿಲ್ಲೆಯ ಆಂಡಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಡಿ .17 ರಂದು ಮದ್ಯಾಹ್ನ ಹೆಣ್ಣಿನ ವಿಷಯದಲ್ಲಿ ಆದ ಗಲಾಟೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಲ್ಲಿ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್‌ ಬಾಬು ಅವರು ತಿಳಿಸಿದ್ದಾರೆ . ಅವರು ಪತ್ರಿಕಾ ಪ್ರಕಟಣೆಯಲ್ಲಿ , ಡಿ .17 ರ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳನ್ನು ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕುರಿತು ಮಾಹಿತಿ ನೀಡಿದರು.

ಆಂಡಸನ್‌ಪೇಟೆ ಪೊಲೀಸ್ ಠಾಣೆಯ ಸರಹದ್ದು ಗೋಣಮಾಕನಹಳ್ಳಿಯ ನಿವಾಸಿ ಗಜೇಂದ್ರನಾಯ್ಡು @ ಸ್ವಾಮಿ ರವರು ತನ್ನ ಮನೆಯ ಬಳಿ ಡಿ .17 ರಂದು ಮದ್ಯಾಹ್ನ 02.30 ರ ಸುಮಾರಿನಲ್ಲಿ ಬರುತ್ತಿರುವಾಗ , ಅದೇ ಗ್ರಾಮ ಗೋಣಮಾಕನಹಳ್ಳಿಯ ನಿವಾಸಿಗಳಾದ ರಾಘವೇಂದ್ರ @ ಎಸ್‌ಪಿ ( 22 ವರ್ಷ ) , ಹರೀಶ್ ( 23 ವರ್ಷ ) , ಜಿ.ಮಂಜುನಾಥ ( 21 ವರ್ಷ ) ರವರುಗಳು ಒಂದು ಹೆಣ್ಣಿನ ವಿಷಯದಲ್ಲಿ ಗಲಾಟೆಗಳಾಗಿದ್ದ ದ್ವೇಷದ ಹಿನ್ನೆಲೆಯಲ್ಲಿ ಗಜೇಂದ್ರನಾಯ್ಡು ಸ್ವಾಮಿ ರವರನ್ನು ಅಡ್ಡಗಟ್ಟಿ ದಾಳಿ ಮಾಡಿ ಗ್ರಾಮದ ಜಯರಾಮ್ ರವರ ನೀಲಗಿರಿ ತೋಪಿಗೆ ಕರೆದುಕೊಂಡೋಗಿ ಚಾಕುಗಳಿಂದ ಕುತ್ತಿಗೆ ಕೋಯ್ದು , ಚೆನ್ನಾಗಿ ಹೊಡೆದು ಕೊಲೆ ಮಾಡಿ ಸಾಯಿಸಿದ್ದು , ಈ ಸಂಬಂಧ ಆರೋಪಿಗಳ ವಿರುದ್ಧ ಆಂಡಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು .
ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ , ಡಿವೈಎಸ್ಪಿ ಪಿ.ಮುರಳೀಧರ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ರಾಬರ್ಟ್‌ಸನ್‌ಪೇಟೆ ಸಿಪಿಐ ಕೆ.ನಾಗರಾಜ್ , ಸಿಬ್ಬಂದಿಗಳಾದ ಮ್ಯಾಥ್ಯ ಅಲೆಕ್ಸಾಂಡರ್ , ನಾರಾಯಣಸ್ವಾಮಿ , ಟಿ.ಶಿವಯ್ಯ ಗಜೇಂದ್ರ , ಗೋಪಾಲಕೃಷ್ಣ , ಮಧುಸೂಧನ್ , ರಾಜೇಶ್‌ಬಾಬು , ಸುನಿಲ್ , ಮಹೇಂದ್ರ , ರಘು , ಮುರಳಿ , ಎಸ್.ಗಜೇಂದ್ರ , ಚಂದ್ರಕುಮಾರ್ , ಪ್ರಭಾಕರ್ , ಸತ್ಯಪ್ರಕಾಶ್ ಅವರುಗಳು ತೀವ್ರ ಕಾರ್ಯಾಚರಣೆ ನಡೆಸಿ , ಕೊಲೆ ಪ್ರಕರಣದ ಆರೋಪಿಗಳು ರಾಘವೇಂದ್ರ , ಹರೀಶ್ , ಮಂಜುನಾಥ ರವರುಗಳನ್ನು ಆಂದಪದೇಶದ ಶಾಂತಿಪುರಂನಲ್ಲಿ ಡಿ .18 ರಂದು ಪೊಲೀಸರು ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡೆಕ್ನಾ ಕಿಶೋರ್ ಬಾಬು ಅವರು ತಿಳಿಸಿದ್ದಾರೆ . ಪರಿ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳನ್ನು 24 ಗಂಟೆಗಳಲ್ಲೇ ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ , ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾ ಎಸ್‌ಪಿ ಡೆಕ್ನಾ ಕಿಶೋರ್ ಬಾಬು ಅವರು ಶ್ಲಾಘಿಸಿ , ಪ್ರಶಂಶಿಸಿದ್ದಾರೆ
.