
ಮಂಗಳೂರು: ನಿನ್ನೆ (18 ರಂದು) ಸಂಜೆ ನಾಲ್ಕಕ್ಕೆ ನಗರದ ಲೇಡಿಹಿಲ್ ಬಳಿ ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾಗಿ ಕಾರಿನೊಂದಿಗೆ ಪರಾರಿಯಾದ ಚಾಲಕನು ಕಾರು ನಿಲ್ಲಿಸದೆ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ ಈಗ ಈತನನ್ನು ಬಂಧಿಸಲಾಗಿದೆ, ಈತನನ್ನು ಕಮಲೇಶ್ ಬಲದೇವ್ ಎಂದು ಗುರುತಿಸಲಾಗಿದೆ.

ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ದಿಂದ ಕಾರು ಚಾಲನೆ ಮಾಡಿದ ಕಮಲೇಶ್ ಬಲದೇವ್ ಕುದ್ರೋಳಿ ದೇಗುಲಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಯುವತಿ ಹಾಗೂ ಮಕ್ಕಳಿದ್ದ ಗುಂಪಿಗೆ ಕಾರು ನುಗ್ಗಿಸಿದ್ದ. ಇದರ ಪರಿಣಾಮ ಸುರತ್ಕಲ್ ಸಮೀಪದ ಕಾನ ಬಾಳದ ನಿವಾಸಿ ಗಂಗಾಧರ ಅವರ ಪುತ್ರಿ 23ರ ಹರೆಯದ ರೂಪಶ್ರೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪ್ರಾಪ್ತ ಬಾಲಕಿಯರು ಸೇರಿದಂತೆ ಇನ್ನೊರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಪಘಾತದಲ್ಲಿ ಸುರತ್ಕಲ್‌ನ ರೂಪಶ್ರೀ (23) ಸ್ಥಳದಲ್ಲೇ ಕೂನಯುಸಿರಳದಿದ್ದರು ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರೂಪಶ್ರೀ ಜತೆಯಿದ್ದ ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12)ಗೆ ಗಂಭೀರ ಗಾಯಗಳಾಗಿವೆ.ಈ ಐವರೂ ಯುವತಿಯರು ಲೇಡಿಹಿಲ್‌ನಿಂದ ಮಣ್ಣಗುಡ್ಡ ಜಂಕ್ಷನ್ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಪಘಾತದ ಭೀಕರ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನ ನೋಡಿ ಎಲ್ಲರು ಮರುಗುವಂತೆ ಮಾಡಿದೆ. ಹುಂಡೈ ಇಯಾನ್ ಕಂಪೆನಿಯ (ka 19 Md 5676) ನೋಂದಣಿ ಹೊಂದಿದ್ದ ಕಾರು ಇದಾಗಿದ್ದು, ಕಾರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿ ಕಾರಿನ ಚಾಲಕ ರಿಯಲ್ ಎಸ್ಟೇಟ್ ಏಜೆಂಟ್ ಎಂದು ತಿಳಿದುಬಂದಿದೆ.
ಅಪಘಾತಕ್ಕೆ ಕಾರಣವಾದ ಕಾರು
