ದೇವಸ್ಥಾನದಲ್ಲಿ  ಇಫ್ತಾರ್ ಕೂಟ ಏರ್ಪಡಿಸಿ‌  ಕೋಮು ದ್ವೇಷ ಬಿತ್ತುವವರ ಮಧ್ಯೆ ಸಾಮರಸ್ಯ ಬೆಸದ ಜನ 

 JANANUDI.COM NETWORK

ಅಹ್ಮದಾಬಾದ್, ಏ.9; ಖ್ಯಾತ ಹಿಂದು ದೇವಾಲಯದಲ್ಲಿ ಮುಸ್ಲಿಮರಿಗೆ ‌ಇಪ್ತಾರ್ ಕೂಟವನ್ನು ಏರ್ಪಡಿಸಿ ಸಾಮರಸ್ಯ ಮೆರೆದಿರುವ ಘಟನೆ ಗುಜರಾತ್‍ನ ಬಾಣಸ್ವಾತ್  ಜಿಲ್ಲೆಯ ದಲ್ವಾನ ಎಂಬ ಗ್ರಾಮದಲ್ಲಿ‌ ನಡೆದಿದೆ. ವರಂದ ವೀರ್ ಮಹಾರಾಜ್ ಮಂದಿರ್ ರಮಝಾನ್ ಉಪವಾಸ ತೊರೆಯಲು ಸುಮಾರು 100 ಮುಸ್ಲಿಮರಿಗೆ ವ್ಯವಸ್ಥೆ ಮಾಡಿ‌ಕೊಟ್ಟು‌ ಇಂದು ಅಗತ್ಯವಾದ ಬೇಕಾಗಿರುವ ಸಾಮರಸ್ಯಕ್ಕೆ ಸುದ್ದಿಯಾಗಿದೆ.

    ವಡ್ಗಮ್ ತಾಲೂಕಿನ 1200 ವರ್ಷಗಳ ಇತಿಹಾಸವುಳ್ಳ ದೇವಲಯದಲ್ಲಿ ನಿನ್ಮೆ ಸಂಜೆ ಇಫ್ತಾರ್ ವ್ಯವಸ್ಥೆ ಮಾಡಿರುವ ಬಗ್ಗೆ ವರದಿಯಾಗಿದೆ.ಉಪವಾಸ ತೊರೆಯಲು ಹಣ್ಣುಗಳು, ಪಾನೀಯಗಳ‌ ವ್ಯವಸ್ಥೆ‌ ಮಾಡಲಾಗಿದೆ. ದೇವಳದ ಅರ್ಚಕ ಪಂಕಜ್ ಠಾಕರ್ ಮಸೀದಿಯ ಮೌಲಾನ ಸಾಹಿಬ್ ಅವರನ್ನು ಇಫ್ತಾರ್ ಕೂಟಕ್ಕೆ ಸ್ವಾಗತಿಸಿದ್ದರು