ಬೈಂದೂರು, 7; ಬೈಂದೂರಿನ ರೈನ್ ಬೋ ಬುಡಾಕೊನ್ ಕರಾಟೆ ಅಕಾಡೆಮಿ, ಕರ್ನಾಟಕ, ಇಂಡಿಯಾ ಇವರಿಂದ್ ಬೈಂದೂರಿನಲ್ಲಿ ಜನವರಿ 4 ಮತ್ತು 5 ರಂದು ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2025 ಇದರಲ್ಲಿ ಅರ್ನೋನ್ ಡಿ ಅಲ್ಮೆಡ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾನೆ. ಈತ ಎಚ್ ಎಮ್ ಎಮ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿ ಯಾಗಿದ್ದು.ಈತ ಕುಂದಾಪುರದ ನಿವಾಸಿ ವಿಲ್ಸನ್ ಹಾಗೂ ಜ್ಯೋತಿ ಡಿ ಅಲ್ಮೆಡ್ ಅವರ ಪುತ್ರನಾಗಿದ್ದಾನೆ.
ಇವನಿಗೆ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ. ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ ಶಿಹಾನ್ ಶೇಖ್, ಬಸ್ರೂರು, ಇವರು ತರಬೇತಿ ನೀಡಿದ್ದರು.