ಆರೆಸ್ಸೆಸ್ ನವರು ಭಾರತೀಯರಾ? ದ್ರಾವಿಡರಾ?: ಸಿದ್ದರಾಮಯ್ಯ ಸವಾಲು!

JANANUDI.COM NETWORK


ಬೆಂಗಳೂರು: ಬಿಜೆಪಿ ಸರ್ಕಾರ ಬಂದ ಮೇಲೆ ಯಾವ ಚರಿತ್ರೆಯನ್ನು ಓದಿಕೊಳ್ಳಬೇಕು ಎನ್ನುವುದೇ ಕಷ್ಟವಾಗಿದೆ. ಆರೆಸ್ಸೆಸ್ ನವರು ಮೂಲತಃ ಭಾರತದವರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ಜವಾಹರ್‌ಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಆರೆಸ್ಸೆಸ್ ನವರು ಮೂಲತಃ ಭಾರತದವರಾ? ಆರೆಸ್ಸೆಸ್ ನವರು ದ್ರಾವಿಡರಾ? ನಾವು ಅದೆಲ್ಲ ಚರ್ಚೆ ಮಾಡುವುದು ಬೇಡ ಅಂತಿದ್ದೇವೆ ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನುಡಿದರು. ಡಾ| ಅಂಬೇಡ್ಕರ್ ಅವರು ಹೇಳಿದ್ದೇನಂದ್ರೆ, ಯಾರು ಚರಿತ್ರೆಯನ್ನು ತಿಳಿದುಕೊಳ್ಳುವುದಿಲ್ವೋ ಅವರು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅಂತ. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದ ಬಳಿಕ ಯಾವ ಚರಿತ್ರೆಯನ್ನು ಓದಿಕೊಳ್ಳಬೇಕು ಎನ್ನುವುದೇ ಕಷ್ಟಕರವಾಗಿದೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿಯಾದರು.
ನೆಹರೂ ಮತ್ತು ಈಗಿನ ಪ್ರಧಾನಿಯನ್ನು ಹೋಲಿಕೆ ಮಾಡಿ ಮಾತನಾಡಲು ಸಾಧ್ಯವಿಲ್ಲ. ಯಾಕೆಂದರೆ, ನೆಹರೂ ಅವರು ಮಾಧ್ಯಮದವರು, ಮತ್ತು ವಿರೋಧ ಪಕ್ಷದವರ ಯಾವ ಪ್ರಶ್ನೆ ಕೇಳಿದರೂ ಅದಕ್ಕೆ ಮನ್ನಣೆ ಕೊಟ್ಟು ಸಮರ್ಥವಾಗಿ ಉತ್ತರಿಸುತ್ತಿದ್ದರು. ಅಂತಹ ಎದೆಗಾರಿಕೆ ಇವರೀಕ್ಯಾಕೆ ಇಲ್ಲ ಎಂದು ಪ್ರಶ್ನಿಸಿದರು
. ಇವತ್ತಿನ ಪ್ರಧಾನಿಗೂ ನೆಹರೂಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ನೆಹರೂ ಎಲ್ಲಿ, ನರೇಂದ್ರ ಮೋದಿ ಎಲ್ಲಿ? ಎಂದು ವ್ಯಂಗ್ಯವಾಡಿ, ಭೂಮಿಗೂ ಆಕಾಶಕ್ಕೂ ಇರುವಷ್ಟು ವ್ಯತ್ಯಾಸ ಇದೆ’ ಎಂದರು.
ಈಗ ನೆಹರೂ ಅವರು ಮಾಡಿದ ಎಲ್ಲ ಒಳ್ಳೆಯ ಕೆಲಸಗಳನ್ನು ಅಳಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ.