ಉಪ ವಿಭಾಗೀಯ ಕುಂದಾಪುರ ಸರಕಾರಿ ಅಸ್ಪತ್ರೆಗೆ “ಅಪ್ರಿಶಿಯೇಶನ್” ಪ್ರಶಸ್ತಿ

ಕುಂದಾಪುರ,17,ಉಪ ವಿಭಾಗೀಯ  ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಅಪ್ರಿಶಿಯೇಶನ್ ಪ್ರಶಸ್ತಿ ಲಭಿಸಿದೆ. ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ  77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಠಾನ್‌ ಭರತ್‌ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಆರೋಗ್ಯ ಕರ್ನಾಟಕ  (AB -PMJAY -ARK )  ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಬಂಧ ಜಿಲ್ಲಾ  ಮಟ್ಟದಿಂದ ಪ್ರಶಂಸಾ ಪ್ರಮಾಣಪತ್ರವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ ಇವರು ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ. ರಾಬರ್ಟ್‌ ರೆಬೆಲ್ಲೊ ಇವರಿಗೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಇತರ ಅಧಿಕಾರಿಯವರು. ಉಪಸ್ಥಿತರಿದ್ದರು. ಆಯುಷ್ಯಾನ್‌ ಭರತ್‌ ಪ್ರಧಾನ ಮಂತ್ರಿ ಜನಾರೋಗ್ಯ ಅಯೋಜನೆಯಡಿ ಜಿಲ್ಲಾವಾರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಹಾಗೂ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಸಾಧಿಸಿರುವ ಕಾರ್ಯಕ್ಷಮತೆ ಹಾಗೂ ಯೋಜನೆಯ ಸದ್ಗಳಕೆ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಹಿಂದಿನ ಸಾಲಿನಲ್ಲಿ ಕಾಯಕಲ್ಪ ಪ್ರಶಸ್ತಿ ಹಾಗೂ ಲಕ್ಷ್ಯ ಪ್ರಶಸ್ತಿಯು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆಯೆಂದು ಡಾ. ರಾಬರ್ಟ್‌ ರೆಬೆಲ್ಲೊ ತಿಳಿಸಿದ್ದಾರೆ