ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಿಂದ ಜಿಲ್ಲಾ ಘಟಕಗಳ ಅಧ್ಯಕ್ಷರ ಪದಾಧಿಕಾರಿಗಳ ನೇಮಕ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎನ್.ಬಿ. ಗೋಪಾಲಗೌಡರು ಕ.ಸಾ.ಪ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಹಾಗೂ ಅಧ್ಯಕ್ಷರುಗಳನ್ನು ನೇಮಕ ಮಾಡಿದ್ದಾರೆ .

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಜೆ.ಜಿ. ನಾಗರಾಜ್ , ಗೌರವ ಕಾರ್ಯದರ್ಶಿಗಳಾಗಿ ಸಹ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ.ಆರ್.ಶಂಕರಪ್ಪ ಮತ್ತು ಹಿರಿಯ ಪತ್ರಕರ್ತರಾದ ಕೆ.ಎಸ್ . ಗಣೇಶ್‌ರವರನ್ನು , ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಕನ್ನಡ ಪಂಡಿತರಾದ ಕೆ.ಎನ್ . ಪರಮೇಶ್ವರನ್ ಮತ್ತು ಎನ್ . ಮುನಿವೆಂಕಟೇಗೌಡ , ಗೌರವ ಕೋಶಾಧ್ಯಕ್ಷರಾಗಿ ಕನ್ನಡ ಉಪನ್ಯಾಸಕರಾದ ವಿನಯ್ ಗಂಗಾಪುರ ರವರನ್ನು ನೇಮಿಸಲಾಗಿದೆ . ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಲಾವಿದರಾದ ಎಲ್ . ಕೃಷ್ಣಗೌಡ , ಪರಿಶಿಷ್ಠ ಜಾತಿ ಪ್ರತಿನಿಧಿಗಳಾಗಿ ನಾ . ವೆಂಕಟರವಣ ಮತ್ತು ಪ್ರಾಧ್ಯಾಪಕಿ ಡಾ.ಪಸನ್ನ ಕುಮಾರಿ , ಪರಿಶಿಷ್ಠಪಂಗಡದ ಪ್ರತಿನಿಧಿಯಾಗಿ ಆವಣಿಹಚ್ . ಆನಂದ್ , ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಜನವಾದಿ ಮಹಿಳಾ ಸಂಘಟನೆಯ ಪಿ . ಗೀತಾರವರನ್ನು ಗಡಿನಾಡು ಪ್ರತಿನಿಧಿಗಳಾಗಿ ತಾಯಲೂರು ಗೋಪಿನಾಥ್ ಮತ್ತು ಕನ್ನಡ ಉಪನ್ಯಾಸಕರಾದ ಆನೀಫ್ ಸಾಬ್‌ರವರನ್ನು ನೇಮಕ ಮಾಡಲಾಗಿದೆ .
ಮಹಿಳಾ ಸಾಹಿತಿಗಳ ಪ್ರತಿನಿಧಿಯಾಗಿ ಮಾಯಬಾಲಚಂದ್ರ ಮತ್ತು ಲಕ್ಕೂರು ಶೈಲಜರವರನ್ನು ಜಿಲ್ಲಾ ಪ್ರಧಾನ ಸಂಚಾಲಕರಾಗಿ ಪಿ . ನಾರಾಯಣಪ್ಪ , ಆರ್.ರವಿಕುಮಾರ್ , ಮಾಗೇರಿ ಶೀನಿವಾಸ್ ಮತ್ತು ಮುರಳಿ ಮೋಹನ್‌ ಜಿಲ್ಲಾ ಸಂಚಾಲಕರಾಗಿ ಹರಟ ನಾರಾಯಣಪ್ಪ , ಕನ್ನಡಮಿತ , ವೆಂಕಟಪ್ಪ , ಎನ್ . ಮುನಿರಾಜು ಮತ್ತು ವಿ.ಶ್ರೀರಾಮ್ , ಪತ್ರಿಕಾ ಕಾರ್ಯದರ್ಶಿಯಾಗಿ ಹೊಸದಿಗಂತ ಶ್ರೀನಿವಾಸಲು ರವರನ್ನು ನೇಮಕಮಾಡಲಾಗಿದೆ . ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ಪೌಢಶಾಲಾ ಮುಖ್ಯ ಶಿಕ್ಷಕರಾದ ಜಿ.ಆರ್‌ . ಶಂಕರೇಗೌಡ , ಮಾಲೂರು ತಾಲ್ಲೂಕು ಅಧ್ಯಕ್ಷರಾಗಿ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷರಾದಎಂ.ವಿ . ಹನುಮಂತಯ್ಯ , ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷರಾಗಿ ಹಿರಿಯ ಉಪನ್ಯಾಸಕರಾದ ಪಿ.ಎಸ್ . ಮಂಜುಳಾ , ಮುಳಬಾಗಿಲು ತಾಲ್ಲೂಕು ಅಧಕರಾಗಿ ಸಮಾಜ ಸೇವಕರಾದ ಹೆಚ್.ಎಸ್ . ಶೀಹರೀಶ್ , ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಶಿಕ್ಷಕರಾದ ಆರ್ . ಸಂಜೀವಪ್ಪ ಹಾಗೂ ಕೆ.ಜಿ.ಎಫ್ ತಾಲ್ಲೂಕು ಅಧ್ಯಕರಾಗಿ ಹೋಬಳಿ ಕ.ಸ.ಪಾ ಮಾಜಿ ಅಧ್ಯಕ್ಷರಾದ ಕೆ.ಎ.ಶ್ರೀಹರಿ ರವರನ್ನು ನೇಮಕ ಮಾಡಲಾಗಿದೆ .