ಕೋಲಾರ : ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ, ಡಿಪ್ಲೋಮಾ, ತಾಂತ್ರಿಕ ಮತ್ತು ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಸಮುದಾಯ ವರ್ಗದವರಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಭೌಧ ಮತ್ತು ಪಾರ್ಸಿ ಮತ್ತು ಬೌದ್ದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು, ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು, ಮೆಟ್ರಿಕ್ ನಂತರದ (ಶುಲ್ಕ ಮರುಪಾವತಿ) ಗಾಗಿ ಕಟುಂಬದ ವಾರ್ಷಿಕ ವರಮಾನ ಒಟ್ಟು ಆದಾಯ ರೂ. 2 ಲಕ್ಷಗಳನ್ನು ಮೀರಿರಬಾರದು ಮತ್ತು ಮೆರಿಟ್-ಕಂ-ಮೀನ್ಸ್(ಶುಲ್ಕ ಮರುಪಾವತಿ) ಗಾಗಿ ರೂ.2.5 ಲಕ್ಷಗಳನ್ನು ಮೀರಿರಬಾರದು.
ಅಲ್ಪಸಂಖ್ಯಾತರ ಅರ್ಹ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ (ಎಸ್.ಎಸ್.ಪಿ) ವೆಬ್ಸೈಟ್ https://ssp.postmatric.karnataka.gov.in/ ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.domkarnataka.nic.in ಹಾಗೂ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನೆಲ ಮಹಡಿ, ಮೌಲಾನಾ ಆಜಾದ್ ಭವನ, ಶ್ರೀ ದೇವರಾಜ್ ಅರಸು ಬಡಾವಣೆ, 2ನೇ ಬ್ಲಾಕ್, ಟಮಕ ವಾರ್ಡ್ ನಂ.1, ಕೋಲಾರ-563103 ದೂರವಾಣಿ ಸಂ:08152-295257 ಅನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.