

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ
ಸಮತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ಅರಕಲಗೋಡು ಅಕ್ಷರ
ದಾಸೋಹ ನಿರ್ದೇಶಕರ ವಿರುದ್ಧ ಕ್ರಮ ಶಿಸ್ತು ಕ್ರಮ ಕೈಗೊಳ್ಳುವಂತೆ
ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ಮನವಿ ಪತ್ರ ನೀಡಿದರು.
ಸಮಿತಿಯ ಉಪಾಧ್ಯಕ್ಷ ಎಚ್.ವಿ.ಅಶೋಕ್ ಮಾತನಾಡಿ ಅರಕಲಗೋಡು ಅಕ್ಷರ
ದಾಸೋಹ ನಿರ್ದೇಶಕ ಶಿವಕುಮಾರ್, ಅರಕಲಗೋಡು ಬಿಇಒ ಕಚೇರಿಯಲ್ಲಿ
ಗಿರಿಜಾನಂದ ಮುಂಬಳೆ ಅವರನ್ನು ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ.
ಬೂಟು ಕಾಲಿನಿಂದ ಒದ್ದು ಕೈ ಮುರಿದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ
ಗಿರಿಜಾನಂದ ಮುಂಬಳೆ ಹಾಸನದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅರಕಲಗೋಡು ಪೊಲೀಸ್ ಠಾಣೆಯಲ್ಲಿ
ಮೊಕದ್ದಮೆ ದಾಖಲಾಗಿದೆ. ಎಫ್‍ಐಆರ್ ಮಾಡಲಾಗಿದೆ. ಆದ್ದರಿಂದ ಗಿಜಾನಂದ ಮುಂಬಳೆ
ಅವರ ಮೇಲೆ ಹಲ್ಲೆ ನಡೆಸಿರುವ ಅಕ್ಷರ ದಾಸೋಹ ನಿರ್ದೇಶಕ ಶಿವಕುಮಾರ್
ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ರಾಮಾಂಜನೇಯ, ಗೌರವಾಧ್ಯಕ್ಷ
ಕೃಷ್ಣಪ್ಪ, ಮುಖಂಡರಾದ ಎಚ್.ವಿ.ಅಶೋಕ್, ಎಂ.ಸಿ.ಕೃಷ್ಣಪ್ಪ, ಹರೀಶ್ ಬಾಬು
ಇದ್ದರು.