ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮಾ.16: ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಎಲ್.ಐ.ಸಿಯನ್ನು ಷೇರು ಮಾರುಕಟ್ಟೆ ವ್ಯಾಪ್ತಿಗೆ ತರುತ್ತಿರುವುದರ ವಿರುದ್ಧ ಭಾರತೀಯ ಜೀವವಿಮಾ ಶಾಖೆ (ಎ.ಐ.ಐ.ಇ.ಎ) ಕೋಲಾರದ ಪದಾಧಿಕಾರಿಗಳು ಈಗಾಗಲೇ 4-3-2021 ರಂದು ಕೋಲಾರ ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿ ರವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಐ.ಐ.ಇ.ಎ ಅಧ್ಯಕ್ಷರಾದ ಕೆ.ಮುರಳಿ, ಕಾರ್ಯದರ್ಶಿ ಗೌರೀಶಂಕರ್, ಸದಸ್ಯರಾದ ರಾಮಕೃಷ್ಣ, ಶ್ರೀಧರ್, ಕೆ.ಎಸ್ ಕುಮಾರ್, ಶ್ರೀಕಾಂತ್ ಉಪಸ್ಥಿತರಿದ್ದರು.