ಯಾವುದೇ ಒಂದು ಸರ್ಕಾರ ರೈತರ ಹಿತವನ್ನು ಕಾಪಾಡಬೇಕು-ಬಿಜೆಪಿ ರಾಜ್ಯಾಧ್ಯಕ್ಷ ನಲೀನ್ ಕುಮಾರ್ ಕಟೀಲ್

ಶ್ರೀನಿವಾಸಪುರ : ಯಾವುದೇ ಒಂದು ಸರ್ಕಾರ ರೈತರ ಹಿತವನ್ನು ಕಾಪಾಡಬೇಕು, ಯಾವುದೇ ಸರ್ಕಾರವಾಗಲಿ ರೈತರೊಂದಿಗೆ ಮಾತುಕತೆ ನಡೆಸಬೇಕು. ಇದನ್ನು ಬಿಟ್ಟು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಲೀನ್ ಕುಮಾರ್ ಕಟೀಲ್ ಪ್ರಶ್ನಿಸದರು?
ರೈತರು ಬೆಳೆದ ಬೆಳೆಗಳ ಫಸಲು ಕೀಳುವುದಕ್ಕೆ ಅವಕಾಶ ನೀಡದೆ, ರೈತರೊಂದಿಗೆ ಮಾತುಕತೆ ನೀಡದೆ ರಾತ್ರೋರಾತ್ರಿ ನೂರಾರು ಜೆಸಿಬಿ ಮುಖಾಂತರ ಬಂದು ಬೆಳೆಗಳನ್ನು ನಾಶ ಪಡಿಸುವುದು ಅವಶ್ಯಕತೆ ಆದರೂ ಏನು ಎಂದು
ತಾಲೂಕಿನ ಕೇತುಗಾನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯ ನಾಶಪಡಿಸಲಾದ ರೈತರ ತೋಟಗಳಿಗೆ ಭಾನುವಾರ ಬೇಟಿ ನೀಡಿ ಮಾತನಾಡಿದರು.
ಈ ನಿಟ್ಟಿನಲ್ಲಿ ಸರ್ಕಾರವು ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು . ರೈತರ ಪರವಾಗಿ ನಾವಿದ್ದೇವೆ ರೈತರ ಹಾಗು ಸಂಸದರ ಮೇಲೆ ಕೇಸು ದಾಖಲಿಸಿರುವುದನ್ನ ಹಿಂಪಡಯಬೇಕು. ರೈತ ವಿರೋಧಿ ನೀತಿಗಳನ್ನು ಹಿಂಪಡಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಪಡೆದು ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಸದ ಮುನಿಸ್ವಾಮಿ ಮಾತನಾಡಿ ಕಂದಾಯ ಇಲಾಖೆ ನೀಡಿರುವ ಆರ್‍ಟಿಸಿ ಹಾಗು ಇತರೆ ದಾಖಲೆಗಳನ್ನ ದರಖಾಸ್ತು ಮುಖಾಂತರ ಸಾಗುವಳಿ ಚೀಟಿ
ಈ ಭಾಗದ ರೈತರಿಗೆ ತಂದೆ, ತಾತ, ಮುತ್ತಾನ ಕಾಲದಿಂದಲೂ ಸರ್ಕಾರವು ನೀಡಿರುವ ಭೂಮಿಯಲ್ಲಿ ಉಳಿಮೆ ಮಾಡಿ ವ್ಯವಸಾಯ ಮಾಡುತ್ತಿದ್ದು,
ದೇಶದ ಅನ್ನದಾತರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತೀರುವುದು ಖಂಡನೀಯ. ಈ ರೀತಿಯಾಗಿ ಅನ್ನದಾತರ ಮೇಲೆ ದಬ್ಬಾಳಿಕೆ ನಡೆಸಿದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಆಗ್ರಹಿಸಿದರು.
ಅನ್ನದಾತರು ಉಗ್ರಗಾಮಿಗಳು ಅಲ್ಲ. ಅನ್ನದಾತರು ಭೂಗಳ್ಳರು ಅಲ್ಲ. ಯಾರು 20, 30, 40 ಎಕರೆಗಳಷ್ಟು ಭೂಮಿಯಲ್ಲಿ ಉಳಿಮೆ ಮಾಡುತ್ತಿಲ್ಲ. ಯಾರು 20, 30, 40 ಎಕರೆಗಳಲ್ಲಿ ಒತ್ತುವರಿ ಮಾಡಿಕೊಂಡಿರುವವರ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಎಂದು ಆಗ್ರಹಿಸಿದರು.
1 ಎಕರೆ , ಅರ್ಧ ಕುಂಟೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವವರ ದೌರ್ಜನ್ಯ ಮಾಡುವುದು ಸರಿಯಲ್ಲ. ರೈತ ಆತ್ಮಹತ್ಯೆ ಸಂದರ್ಭಗಳನ್ನು ಸರ್ಕಾರದ ರೈತರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕು ಅದನ್ನ ಬಿಟ್ಟು ರೈತರ ಮೇಲೆ ದಬ್ಭಾಳಿಕೆ ಮಾಡುತ್ತಿರುವುದು ಎಷ್ಟ ಸಮಂಜಸ ಎಂದು ಪ್ರಶ್ನಿಸಿದರು.
ನಾವು ನೀವು ತಿನ್ನುವುದು ಅನ್ನವನ್ನೇ ಅನ್ನವನ್ನು ಉತ್ಪಾದಿಸುವ ಅನ್ನದಾತರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಮುಂದಿನ ದಿನಳಲ್ಲಿ ನಾವು , ನೀವು ತಿನ್ನುವುದು ಅನ್ನವನ್ನ ಅಲ್ಲ ಮಣ್ಣು ತಿನ್ನುತ್ತೇವೆ ಎಂದರು. ರೈತರಿಗೆ ನ್ಯಾಯ ದೊರಕಿಸುವ ನಿಟ್ಟನಲ್ಲಿ ರೈತರ ಪರವಾಗಿ ಜೈಲು ವಾಸ ಅನುಭವಿಸಲು, ರೈತರಿಗಾಗಿ ಪ್ರಾಣತ್ಯಾಗ ಮಾಡಲು ನಾವು ಸಿದ್ದರಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ರೈತರ ಪರವಾಗಿ ಬಿಜೆಪಿ ಪಕ್ಷದವತಿಯಿಂದ ಕಾನೂನು ರೀತ್ಯ ಹೋರಾಟಕ್ಕೆ ರೂಪರೇಷಗಳನ್ನು ಹಮ್ಮಿಕೊಂಡು ಹೋರಾಟ ಮಾಡಲಾಗುವುದು ಎಂದರು.
ಸಂಸದ ಮುನಿಸ್ವಾಮಿ, ಎಂಎಲ್‍ಸಿ ರವಿಕುಮಾರ್ , ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಹಾಗೂ ರೈತ ಮುಖಂಡರು ಇದ್ದರು.