ಸಂವಿಧಾನ ವಿರೋದಿ ನ್ಯಾಯದೀಶ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ಅಮಾನತ್ತು ಗೊಳಿಸಿ ಗಡಿ ಪಾರು ಮಾಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಸಂವಿಧಾನ ವಿರೋದಿ ರಾಯಚೂರು ಜಿಲ್ಲೆಯ ನ್ಯಾದೀಶರಾದ ಮಲ್ಲಿಕಾರ್ಜುನಗೌಡ ರವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಗಡಿ ಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.


ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂದೆ ದಲಿತ ಸಂಘಟನೆಗಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ದಲಿತ ಬುದ್ದಸೇನೆಯ ರಾಜ್ಯಾಧ್ಯಕ್ಷ ವರ್ತನಹಳ್ಳಿ ವೆಂಕಟೇಶ್ ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಆಗಿದೆ ಆದರೆ ದಲಿತರ ಮೇಲೆ ದೌಜನ್ಯ ದಬ್ಬಾಳಿಕೆ ನಡೆಯುತ್ತಿರುವುದು ಒಂದು ಕಡೆಯಾದರೆ ಇತ್ತೀಚಿನ ದಿನಗಳಲ್ಲಿ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಬಾವ ಚಿತ್ರಗಳಿಗೆ ಅಪಮಾನ ಮಾಡುತ್ತಿರುವುದು ಮತ್ತು ಸಂವಿಧಾನಕ್ಕೆ ವಿರೋದವಾಗಿ ನಡೆದುಕೊಳ್ಳುತ್ತಿರುವುದು ವಿಷಾದನೀಯವಾಗಿದೆ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನ್ನ ಸಿಬ್ಬಂದಿಯಿಂದ, ಬಲತ್ಕಾರದಿಂದ ಡಾ||ಬಾಬಾ ಸಾಹೇಬರ ಬಾವಚಿತ್ರವನ್ನು ತೆರವುಗೊಳಿಸಿರುವುದು ಖಂಡನೀಯ ನ್ಯಾಯಾಧೀಶರನ್ನು ದೇಶ ದ್ರೋಹಿ ಸಂವಿಧಾನ ವಿರೋಧಿ ಎಂದು ಪರಿಗಣಿಸಿ ಕೂಡಲೆ ಸೇವೆಯಿಂದ ಅಮಾನತ್‍ಗೊಳಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆಯನ್ನು ಹಮ್ಮಿಗೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.


ದಲಿತ ಸಂಘಟನೆಯ ಹಿರಿಯ ಮುಖಂಡ ಉಪ್ಪರಪಲ್ಲಿ ತಿಮ್ಮಯ್ಯ ಮಾತನಾಡಿ ನ್ಯಾಯಾಧೀಶ ಎಂದರೆ ಧರ್ಮ, ಜಾತಿ, ಲಿಂಗದ ಹೆಸರಿನಲ್ಲಿ ಬೇದ ತಾರತಮ್ಯ ಮಾಡದೆ ಸರ್ವರಿಗೂ ಸಮಾನ ನ್ಯಾಯವನ್ನು ಕೊಡವಂತಹ ಪ್ರಾಮಾಣೀಕರೆಂಬ ಕಾರಣಕ್ಕಾಗಿಯೇ ಈ ಕಾಲದಲ್ಲಿಯೂ ನ್ಯಾಯಾಲಯಗಳಿಗೆ ಗೌರವವಿದೆ ಆದರೆ ರಾಯಚೂರು ಜಿಲ್ಲೆಯ ನ್ಯಾಯಾಧೀಶರು ಗಣರಾಜ್ಯೋತ್ಸವ ಮತ್ತು ಸಂವಿಧಾನ ಜಾರಿ ದಿನದ ಸಂಧರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವ ಚಿತ್ರವನ್ನು ತೆರವುಗೊಳಿಸಿ ಕಾರ್ಯಕ್ರಮ ನಡೆಸಿರುವುದು ನ್ಯಾಯಾಂಗದ ಮೇಲೆ ಅಪನಂಬಿಕೆಯನ್ನು ಸೃಷ್ಠಿ ಮಾಡದಂತಾಗಿದೆ. ಸಂವಿಧಾನ ವಿರೋದಿಗಳನ್ನು ಹೊರತೆಗೆಯಬೇಕಿದೆ. ಸಂವಿಧಾನ ವಿರೋದಿ ಮನಸ್ಥಿತಿ ಹೊಂದುವುದು ಸಹ ಅಪರಾಧ ಎಂಬ ಗುರುತನ್ನು ನ್ಯಾಯಾಂಗವು ಮಾಡಬೇಕಾಗಿದೆ. ಕೂಡಲೆ ಈ ನ್ಯಾಯಾಧೀಶರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸುತ್ತಿದ್ದೇವೆ ಎಂದರು.


ಇದೇ ಸಮಯದಲ್ಲಿ ಉಪತಹಶೀಲ್ದಾರ್‍ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ವಕೀಲ ನಾರಾಯಣಸ್ವಾಮಿ, ಚಲ್ದಿಗಾನಹಳ್ಳಿ ಈರಪ್ಪ, ವೆಂಕಟೇಶ್, ಕೂಸಂದ್ರ ರೆಡ್ಡೆಪ್ಪ, ಮುದಿಮಡಗು ವಾಸು, ನರಸಿಂಹ, ರೆಡ್ಡೆಪ್ಪ, ಅಂಬೇಡ್ಕರ್ ಪಾಳ್ಯದ ನರಸಿಂಹಮೂರ್ತಿ ಉಪ್ಪರಪಲ್ಲಿ ಚಲಪತಿ, ಹೊದಲಿ ನಾರಾಯಣಸ್ವಾಮಿ, ಶೇಷಾಪುರ ವೆಂಕಟೇಶ್, ಇನ್ನೂ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.