

ಬೆಂಗಳೂರು: ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಅನಾವಶ್ಯಕವಾಗಿ ತಡೆದು ನಿಲ್ಲಿಸಬಾರದು ಎಂದು ಪೊಲೀಸ್
ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುತ್ತೆ. . ಡ್ರಿಂಕ್ ಆಂಡ್ ಡ್ರೈವ್ ಮತ್ತು ಕಣ್ಣಿಗೆ ಕಾಣುವಂತಹ ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಕಂಡುಬಂದ ಹೊರತಾಗಿ ಕೇವಲ ದಾಖಲೆಗಳ ಪರಿಶೀಲನೆಗಾಗಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ
ನಡೆಸುವಂತಿಲ್ಲ. ಈ ಸೂಚನೆಗಳನ್ನು ಕೆಳ ಹಂತಕ್ಕೆ ತಲುಪಿಸಿ ಮತ್ತು ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ
ಎಂದು ಸೂದ್ ಎಚ್ಡರಿಸಿದ್ದಾರೆ.

