

ಶ್ರೀನಿವಾಸಪುರ : ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹತ್ಯೆ, ಹುಬ್ಬಳಿಯಲ್ಲಿ ಅಂಜಲಿ ಅಂಬಿಗೇರ (20 ವರ್ಷ) ಯುವತಿಯ ಹತ್ಯೆಯಾಗಿರುವುದು ರಾಜ್ಯ ಸರ್ಕಾರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯು ಎಷ್ಟು ಹದಗಟ್ಟಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ ರಾಜ್ಯ ಸರ್ಕಾರದ ವಿರುದ್ಧ ಹೀಯಾಳಿಸಿದರು.
ಪಟ್ಟಣದ ಸ್ವಗೃಹದಲ್ಲಿನ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಕೂಡಲೇ ಅಂಜಲಿ ಅಂಬಿಗೇರ ರವರನ್ನ ಕೊಲೆ ಮಾಡಿರುವ ಆರೋಪಿಯನ್ನು ಬಂದಿಸಿ ಕಾನೂನು ರೀತ್ಯ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೊಲೆಗೆ ಕಾರಣಗಳನ್ನ ಪತ್ತೆ ಹಚ್ಚಿ ಮೃತಪಟ್ಟಿರುವ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ರಾಜ್ಯಸರ್ಕಾರ ಮುಂದಾಗಬೇಕೆಂದರು ಒತ್ತಾಯಿಸಿದರು.