

ಇಂಫಾಲ : ಮಣಿಪುರದಲ್ಲಿ ಮತ್ತೊಮ್ಮೆ ಹಿಂಸೆಚಾರ ಭುಗಿಲೆದ್ದಿದ್ದು, ಜನರು ಭಯಭೀತಗೊಂಡಿದ್ದಾರೆ. ಬಿಷ್ಟುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆದ ಪ್ರದೇಶದ ಬಳಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಾಪತ್ತೆಯಾದವರನ್ನು ಓಯಿನಮ್ ರೊಮೆನ್ ಮೈತೆ (45), ಅಹಾಂತೇಮ್ ದಾರಾ ಮೈತೆ (56), ತೌಡಮ್ ಇಬೊಮ್ಮಾ ಮೈತೆ (53) ಮತ್ತು ತೌದಮ್ ಆನಂದ್ಮೈತೆ (27) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೂ ಮೊದಲು ಮಾರ್ಟರ್ ಫೈರಿಂಗ್ ನಡೆದಿದ್ದು, ಘಟನೆ ಕುರಿತು ಕುಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ನಾಲ್ವರು ಬಂಡುಕೋರರ ವಶದಲ್ಲಿರುವ ಸಾಧ್ಯತೆ ಇದ್ದು, ಶೋಧ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರದ ಸಹಾಯವನ್ನು ಕೋರಲಾಗಿದೆ ಎನ್ನಲಾಗಿದೆ.