ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅವಘಡ : ಐವರು ವಿದ್ಯಾರ್ಥಿಗಳು ಬಲಿ

JANANUDI.COM NETWORK


ಹಾಸನ: ಭೀಕರ ಅಪಘಾತವೊಂದರಲ್ಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಹಾಸನದ ಬೇಲೂರು ರಸ್ತೆಯ ಸಂಕೇನಹಳ್ಳಿ ಬಳಿ ನಡೆದಿದೆ.
ಬಸ್ ಹಾಗೂ ಆಲ್ಟೋ ಕಾರು ನಡುವೆ ಈ ಭೀಕರ ಅಪಘಾತ ನಡೆದಿದ್ದು, ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಈ ಅಪಘಾತಕ್ಕೆ ಬಲಿಯಾಗಿದ್ದಾರೆ.
ಕಾರಿನಲ್ಲಿ ಇದ್ದ ಬೇಲೂರು ವಿದ್ಯಾ ವಿಕಾಸನ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿ.ಯು.ಸಿ. ಯ ವಿದ್ಯಾಥಿಗಳಾದ ಅಕ್ಮಲ್ (೧೮) ಜೆಲಾನಿ (೧೯) ತೌಹಿದ್ (೧೮) ಕೈಫ್ (೧೮) ಸ್ಥಳದಲ್ಲೆ ಮ್ರತ ಪಟ್ಟರೆ, ರಿಹಾನ್ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಇವರೆಲ್ಲ ಬೇಲೂರು ಪಟ್ಟಣದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಬೇಲೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿದ್ಯಾರ್ಥಿಗಳ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.