ಕುಂದಾಪುರ: ದಿ:15/12/ 2023: ವಿದ್ಯಾ ಅಕಾಡೆಮಿ ಶಾಲೆ, ಮೂಡ್ಲಕಟ್ಟೆ ಕುಂದಾಪುರದಲ್ಲಿ ವಾರ್ಷಿಕ ಕ್ರೀಡೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಡಾ. ಸೋನಿ ಡಿ’ಕೋಸ್ಟ ಅಧ್ಯಕ್ಷರು, ಜೆಸಿಐ ಕುಂದಾಪುರ ಘಟಕ ಇವರು ಉದ್ಘಾಟಿಸಿ, ಮಕ್ಕಳ ಪೋಷಕರನ್ನು ಉದ್ದೇಶಿಸಿ “ಮಕ್ಕಳಿಗೆ, ದೇವರಲ್ಲಿ ಶ್ರದ್ಧೆ ಯಿರಬೇಕು ಹಾಗೂ ಮಕ್ಕಳ ಪ್ರತಿಯೊಂದು ವಿಷಯದಲ್ಲಿಯೂ ಶಿಸ್ತು ಬೆಳೆಸುವುದು ನಮ್ಮ ಕರ್ತವ್ಯ. ಪ್ರತಿಯೊಂದು ಮಗುವು ಭಗವಂತನ ಅಮೂಲ್ಯ ಸೃಷ್ಟಿ. ನಿಮ್ಮ ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸಬೇಡಿ” ಎಂದರು.
ಮಕ್ಕಳ ಪಥಸಂಚಲ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಪೋಷಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐ ಎಂ ಜೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಸಿದ್ದಾರ್ಥ್ ಜೆ ಶೆಟ್ಟಿ , ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಶಾಲೆಯ ಆಡಳಿತ ಮುಖ್ಯಸ್ಥರಾದ ಪ್ರೊ. ಪಾವನ, ದೈಹಿಕ ಶಿಕ್ಷಕರಾದ ಶ್ರೀಯುತ ಪ್ರವೀಣ್ ಖಾರ್ವಿ, ಐ ಎಂ ಜೆ ಐ ಎಸ್ ಸಿ ಉಪ ಪ್ರಾಂಶುಪಾಲರಾದ ಪ್ರೊ.ಜಯಶೀಲ ಕುಮಾರ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯಾರಾದ ರಶ್ಮಾ ಶೆಟ್ಟಿಯವರು ನಿರೂಪಿಸಿದರು. ಸಂಗೀತ ಮೇಸ್ತಾ ಸ್ವಾಗತಿಸಿದರು. ಸೋಫಿಯಾ ಕರ್ವಾಲೋ ವಂದಿಸಿದರು.
Annual Sports meet at Vidya Academy School, Moodlakatte Kundapura
Kundapura: On 15/12/ 2023, the Annual Sports meet at Vidya Academy School, Moodlakatte Kundapura was celebrated.
The program was inaugurated by Dr. Sony D’Costa President, JCI Kundapur City.She addressed the parents and said, “It is very essential to inculcate discipline in a child in these formative years.
Every child is a precious creation of God,so don’t compare your child with another child. Each child special in its own way. ”Children’s parade and various sports events were held. Competitions were also arranged for parents. Mr. Siddharth J. Shetty, Chairman of IMJ Institutions, Brand Building Director of IMJ Institutions , Dr. Ramakrishna Hegde, School Administrator, Prof. Pavana, Physical Education Director Mr. Praveen Kharvi, Vice Principal of IMJ Institute of Science and Commerce Prof. Jayasheel Kumar, teachers and students were present.
The program was compeered by Mrs Rashma Shetty. Mrs.Sangeetha Mestha welcomed the gathering Mrs.Sophia Carvalho proposed the vote of thanks.