ಕುಂದಾಪುರ, ನ.17: ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕ ಕ್ರಿಡೋತ್ಸವವು ನವೆಂಬರ್ 17 ರಂದು ಗಾಂಧಿ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ್ಘ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಸ್ಪರ್ಧಾಳುಗಳಿಂದ ಪಥಸಂಚಲನದ ಗೌರವನ್ನು ಸ್ವೀಕರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ “ಜೀವನದಲ್ಲಿ ಶಿಕ್ಷಣ ಹೇಗೆ ಮುಖ್ಯವೊ, ಕ್ರೀಡೆಯು ಮುಖ್ಯ, ಎಲ್ಲಾ ಮಕ್ಕಳಿಗೆ ಕ್ರೀಡೆ ಅಂದರೆ ಬಹಳ ಇಷ್ಟ, ಇದನ್ನು ಜೀವನವಿಡಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಲಭ್ಯವಾಗುತ್ತೆ’ ಎಂದು ತಿಳಿಸಿದರು.
ಅತಿಥಿಗಳಾದ ಕ್ಷೇತ್ರ ಶಿಕ್ಷಣ. ಕಚೇರಿ ತಾಲೂಕು ದೈಹಿಕ ಶಿಕ್ಷಣ ಇಲಾಖೆಯ ಅಧಿಕಾರಿ ರವೀಂದ್ರ ನಾಯ್ಕ್ ಧ್ವಜ ರೋಹಣ ಮಾಡಿ “ಜ್ಞಾನಕ್ಕೆ ಶಾಲೆ ಮುಖ್ಯವಾದರೆ, ಆರೋಗ್ಯಕ್ಕೆ ಕ್ರೀಡಾ ಮೈದಾನ ಅಗತ್ಯ” ಎಂದು ತಿಳಿಸಿ “ನಿಮ್ಮ ಶಾಲೆಯ ಕ್ರೀಡೋತ್ಸವವು ಜಿಲ್ಲಾ ಮಟ್ಟದ ಕ್ರೀಡೋತ್ಸವದಂತೆ ಹಮ್ಮಿಕೊಂಡಿದ್ದಿರಿ, ಕ್ರೀಡಾ ತಂಡಗಳ ಪಥಸಂಚಲವಾಗಿದ್ದು ಉತ್ತಮವಾಗಿದು ನೋಡುಗರಿಗೆ ಸಂತೋಷ ತಂದಿದೆ, ವಿದ್ಯಾರ್ಥಿಗಳದೆ ಬ್ಯಾಂಡು ಪಥಸಂಚಲನಕ್ಕೆ ಮೀರುಗು ನೀಡಿತು” ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಇನ್ನೋರ್ವ ಅತಿಥಿ ಯುವ ಕ್ರೀಡಾ ಸಬಲೀಕರಣ ಅಧಿಕಾರಿ ಕುಸುಮಾಕರ ಶೆಟ್ಟಿ ಬೆಲುನಗಳನ್ನು ಹಾರಿಸಿಬಿಟ್ಟು “ಕ್ರೀಡೆ ಮನುಷ್ಯನಿಗೆ ಅಗತ್ಯವಾಗಿ ಬೇಕಿದೆ, ನಮ್ಮ ಆರೋಗ್ಯ ಮತ್ತು ನಮ್ಮ ದೇಹವನ್ನು ಗಟ್ಟಿಮ್ಮುಟ್ಟಾಗಿ ಇಡಲು’ ಅಗತ್ಯ ಎಂದು ತಿಳಿಸಿದರು. ಗೌರವ ಅತಿಥಿ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಪಾರಿವಾಳವನ್ನು ಹಾರಿಬಿಟ್ಟು ಕ್ರಿಡೋತ್ಸಕ್ಕೆ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಅತಿಥಿಗಳನ್ನು ಗೌರವಿಸಿದರು. ಶಾಲಾ ಕ್ರೀಡಾಳುಗಳಿಗೆ ಪ್ರಮಾಣ ವಚನ ಭೋದಿಸಿದರು.
ಕ್ರೀಡೋತ್ಸವನ್ನು ಸಂಘಟಿಸಿದ ಶಾಲಾ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ, ಸಂತ ಮೇರಿ ಶಿಕ್ಷಣ ಸಂಸ್ಥೆಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕ್ರೀಡೋತ್ಸವಕ್ಕೆ ಸಹಕರಿಸಲು ಆಗಮಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಶಾಂತಿ ರಾಣಿ ಬರೆಟ್ಟೊ, ಪ್ರಣಯ್ ಕುಮಾರ್, ಅರುಣ್ ಕುಮಾರ್ ಮತ್ತು ದೀಕ್ಷಿತ್ ಮೇಸ್ತ ಉಪಸ್ಥಿತರಿದ್ದರು. ಶಿಕ್ಷಕಿ ರಂಜಿತಾ ಸ್ವಾಗತಿಸಿದರು. ಶಿಕ್ಷಕಿ ಭಗಿನಿ ಸುನೀತಾ ವಂದಿಸಿದರು, ಶಿಕ್ಷಕಿ ನಿಖಿತಾ ನಿರೂಪಿಸಿದರು.