ಕುಂದಾಪುರ: ” ಕ್ರೀಡೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳೂ ಕೂಡ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತವೆ. ಒಂದು ವೇಳೆ ಸ್ಪರ್ಧೆಯಲ್ಲಿ ಸೋತರೂ, ಅದನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುವುದು ನಮಗೆ ಜೀವನಪಾಠವನ್ನು ಕಲಿಸುತ್ತದೆ. ಕ್ರೀಡೆಯನ್ನು ಮರೆತರೆ ಮುಂದೊಂದು ದಿನ ಆರೋಗ್ಯವಂತ ಯುವಕ- ಯುವತಿಯರನ್ನು ಹುಡುಕಬೇಕಾದೀತು” ಎಂದು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಶ್ರೀ ಚಂದ್ರಶೇಖರ ಶೆಟ್ಟಿ, ಉಪ ಪ್ರಾಂಶುಪಾಲರು, ಕೆ.ಪಿ.ಎಸ್, ಕೋಟೇಶ್ವರ- ಇವರು ತಮ್ಮಉದ್ಘಾಟನಾ ನುಡಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕುಸುಮಾಕರ ಶೆಟ್ಟಿ, ತಾಲೂಕು ಕ್ರೀಡಾ ಮತ್ತು ಯುವಜನ ಅಧಿಕಾರಿಯವರು ಕಾಲೇಜಿನ ಶಿಸ್ತುಬದ್ದ ಕಾರ್ಯಕ್ರಮ ಆಯೋಜನೆಯನ್ನು ಹಾಗೂ ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ರೀತಿಯನ್ನು ಶ್ಲಾಘಿಸಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ ಹಾಗೂ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯ, ಮತ್ತು ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ, ಭಾಂಢ್ಯ- ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು.
ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಾನೀಸ್ ನತಾಶಾ ಡಿಸೋಜಾ ರವರು ಕ್ರೀಡಾಜ್ಯೋತಿ ಮತ್ತು ಪಥಸಂಚಲನ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಕ್ರೀಡಾಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕ್ರೀಡಾಳು ಶೆರಿಲ್ ರೋಸ್ ಮೇರಿ ಡಿಸೋಜಾ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಧನ್ಯವಾದ ಸಲ್ಲಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರುಣಾ ಹೊಳ್ಳರವರು ಕಾರ್ಯಕ್ರಮ ನಿರೂಪಿಸಿದರು. ಹುಡುಗರ ವಿಭಾಗದಲ್ಲಿ ಸೃಜನ್ ಮತ್ತು ಪ್ರೇಕ್ಷಣ್ ಹಾಗೂ ಹುಡುಗಿಯರ ವಿಭಾಗದಲ್ಲಿ ಶೆರಿಲ್ ಡಿಸೋಜಾ ಮತ್ತು ಶಾಂಭವಿ ಚ್ಯಾಂಪಿಯನ್ಸ್ ಆಗಿ ಮೂಡಿ ಬಂದರು.