

ಬ್ರಹ್ಮಾವರ : ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆ ದಿನಾಂಕ10-06-2024 ರಂದು ಎಸ್ ಎಮ್ ಎಸ್ ಪದವಿಪೂವ೯ ಕಾಲೇಜು ಬ್ರಹ್ಮಾವರದ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ “ ಇನ್ಸ್ಪಾಯರ್ “ನ ಬಿಡುಗಡೆ ಸಮಾರಂಭದ ಅಧ್ಯ ಕ್ಷತೆಯನ್ನು ಒ ಎಸ್ ಸಿ ವಿದ್ಯಾಯಸಂಸ್ಥೆಯ ಸಂಚಾಲಕರಾದ ರೆ. ಫಾ. ಎಮ್ ಸಿ ಮಥಾಯಿ ಅವರು ವಹಿಸಿದ್ದರು.ಅವರು ತಮ್ಮ ಅಧ್ಯಕ್ಷೀಯ ಭಷಣದಲ್ಲಿ ” ಈ ಸಂಚಿಕೆ ವಿದ್ಯಾರ್ಥಿಗಳ ಕ್ರೀಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ”ಎಂದರು.
ಬ್ರಹ್ಮಾವರದ ಉದ್ಯಮಿ ಹಾಗೂ ಬ್ರಹ್ಮಾವರ ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಭರತ ಕುಮಾರ್ ಶೆಟ್ಟಿಯವರು ಸಂಚಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಸರ್ವಾಂಗಿಣ ಪ್ರಗತಿಯನ್ನು ಸಾಧಿಸಲು ಸದಾ ಪ್ರಯತ್ನಿಸಬೇಕು” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಐವನ್ ದೊನಾತ್ ಸುವಾರಿಸ್ ಸರ್ವರನ್ನು ಸ್ವಾಗತಿಸಿ , ಉಪನ್ಯಾಸಕರಾದ ರಾಘವೇಂದ್ರ ಐತಾಳ್ ಸ್ವಾಗತಿಸಿ ಸಂತೋಷ ನೀಲಾವರ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


