ಕುಂದಾಪುರ,ನ.28: 452 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 23 ರಂದು ‘ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ವಂ|ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ “ಹಲವು ನಾಮಗಳಿಂದ ಕರೆಯಲ್ಪಡುತ್ತಾಳೆ ಮೇರಿ ಮಾತೆ. ನೀವು ರೋಜರಿ ಮಾತೆಯನ್ನು ನೀವು ಪೆÇೀಷಕರನ್ನಾಗಿ ಪಡೆದು, ಹಲವು ಕ್ರಪಾಟಕ್ಷಗಳನ್ನು ಪಡೆದಿದ್ದಿರಿ. ಮೇರಿ ಮಾತೆ ಪರರಿಗೆ ನೆರವಾಗುವ ಪರೋಪಾಕಾರಿ ಮಹಿಳೆ, ಮೇರಿ ಮಾತೆ ಯೇಸುವಿನ ಉಪದೇಶಗಳನ್ನು ಪಾಲಿಸಿಕೊಂಡು ಬಂದವಳು, ಮೇರಿ ಪವಿತ್ರ ಕುಟುಂಬದ ಮಾತೆ, ಅವರಂತೆ ಯೇಸು ನಮಗೆ ದೈವ ಭಕ್ತಿಯ ಪವಿತ್ರ ಕುಟುಂಬಗಳನ್ನು ಕಟ್ಟಲು ಕರೆ ನೀಡುತ್ತಾರೆ. ನಮ್ಮ ಕುಟುಂಬಗಳು ಪಿತನ ಸುತನ ಪವಿತ್ರಾತ್ಮನ ಹೆಸರಿನಲ್ಲಿ ಕಟ್ಟಬೇಕು, ನಮ್ಮ ಕುಟುಂಬಗಳಲ್ಲಿ ದೇವರ ಪ್ರೀತಿ ಇರಬೇಕು. ಸಂಪೂರ್ಣ ಹ್ರದಯದಿಂದ ದೇವರನ್ನು ಪ್ರೀತಿಸಬೇಕು, ದೇವರಿಗೆ ನಮ್ಮ ನಾಲಿಗೆಯಿಂದ ಸ್ತ್ರೋತ್ರ ಸಲ್ಲಿಸಬೇಕು, ಕಷ್ಟಕಾಲದಲ್ಲಿ ವಿಚಲಿತರಾಗದೆ ದೇವರಲ್ಲಿ ನಂಬಿಕೆ ಇಡಬೇಕು, ಸಂಪೂರ್ಣ ನಂಬಿಕೆಯಿಂದ ದೇವರಲ್ಲಿ ವಿಶ್ವಾಸ ಇಡಬೇಕು. ಪಾಪಕ್ರತ್ಯಗಳಿಂದ ದೂರವಿದ್ದು, ನಿಮ್ಮ ಸಂತತಿಯ ಮೇಲೆ ಆಶಿರ್ವಾದಗಳನ್ನು ಪಡೆಯಿರಿ. ನಾವು ವಿಶ್ವಾಸಿಗಳು, ಭಕ್ತಿಕರು ಎಲ್ಲರೂ ಒಂದು ಕುಟುಂಬದಂತೆ ಜೀವಿಸಿ ಪವಿತ್ರ ಸಭೆಯನ್ನು ಬಲಪಡಿಸೋಣ” ಎಂದು ಅವರು ಸಂದೇಶ ನೀಡಿದರು..
ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಸ್ತ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಾರ್ಮೆಲ್ ಸಂಸ್ಥೆಯ ಹಾಗೂ ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.ಅನೇಕ ಧರ್ಮ ಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾದಿಗಳು ರೊಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.