ಕುಂದಾಪುರ,ಡಿ.8: 397 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.6 ರಂದು ‘ಮೇರಿ ಮಾತೆಯಂತೆ ಯೇಸು ಕ್ರಿಸ್ತರಲ್ಲಿ ನೂತನ ವಿಶ್ವಾಸದಿಂದ ಜೀವಿಸೋಣ’ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಉಡುಪಿ ವಲಯದ ಪ್ರಧಾನ ಧರ್ಮಗುರು ಅ|ವಂ|ಚಾರ್ಲ್ಸ್ ಮಿನೇಜೆಸ್ “ನಾವು ನವ ಭರವಶೆಯಿಂದ ಮೇರಿ ಮಾತೆಯಂತೆ ಯೇಸುವಿನಲ್ಲಿ ಭರವಶೆ ಇಟ್ಟು ಜೀವಿಸಬೇಕು. ನಾವು ಪಾಪದಿಂದ ಜೀವಿಸುತ್ತಾ ಇದ್ದೆವೆ, ಯೇಸು ಕ್ರಿಸ್ತರು ಶಿಲುಭೆ ಹೊತ್ತುಅ ನಡೆಯುವಾಗ ಬಿದ್ದಿದ್ದರು, ಆದರೆ ಅವರೆದ್ದು ನಡೆದರು, ಅದುವೇ ನಮಗೆ ಮಾರ್ಗದರ್ಶನ, ನಾವೂ ಪಾಪದಿಂದಲೇ ಬಿದ್ದಿರಬಾರದು, ನಾವು ಪಾಪದಿಂದ ಮೇಲೆಳಬೆಕು, ಚಿನ್ನ ಎಲ್ಲರಿಗೂ ಪ್ರಿಯ, ಆದರೆ ಚಿನ್ನದಿಂದ ನಗ ನಾಣ್ಯಗಳನ್ನು ಮಾಡಬೇಕಾದರೆ, ಚಿನ್ನವನ್ನು ಬೆಂಕಿಗೆ ಹಾಕಿ, ಪುಟವೀಡಬೇಕು, ಅದನ್ನು ತಿದ್ದಿ ಗುದ್ದಿ ರೂಪ ಕೊಡಬೇಕು ಆಗ ಮಾತ್ರ ಚಿನ್ನಕ್ಕೆ ಸುಂದ ರೂಪ ಬಂದು ಧರಿಸಬಹುದಾಗುತ್ತದೆ, ಹಾಗೇ ನಮಗೆ ಸ್ವರ್ಗ ಸೀಗಬೇಕಿದ್ದರೆ ಜೀವನದಲ್ಲಿ ಸತ್ಯ ನೀತಿ ಸನ್ಮಾರ್ಗದಲ್ಲಿ ನಡೆಯಬೇಕು, ಸನ್ಮಾರ್ಗದಲ್ಲಿ ನಡೆಯುವುದು ಸುಲಭದ ಮಾರ್ಗವಲ್ಲ. ಅಲ್ಲಿ ಕಶ್ಟನಶ್ಟಗಳು ಸಿಗುತ್ತವೆ. ಈ ಕಶ್ಟ ನಶ್ಟಗಳನ್ನು ಎದುರಿಸಲು ನಾವು ಯೇಸುಕ್ರಿಸ್ತ ಭರವಶೆಯ ಮಾರ್ಗದಲ್ಲಿ ನಡೆಬೇಕು” ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯದ ನುಡಿಗಳನ್ನಾಡಿದರು. ಗಂಗೊಳ್ಳಿಯ ಧರ್ಮಗುರು ವಂ| ರೋಶನ್ ಥಾಮಸ್ ಡಿಸೋಜಾ ವಂದಿಸಿದರು. ಕುಂದಾಪುರ ವಲಯದ ಧರ್ಮಕೇಂದ್ರದ ಅನೇಕ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ವಾರ್ಷಿಕ ಮಹಾ ಹಬ್ಬದ ಪೋಷಕರಾದ ಪ್ರಕೃತಿ ಮತ್ತು ಅಲ್ಟನ್ ರೆಬೇರೊ, ಹಾಗೂ ಕುಟುಂಬಸ್ಥರಾದ, ಸುನೀತಾ ಉಪೇಂದ್ರ, ಅಲನ್ಸ್ಟೈನ್ ರೆಬೇರೊ, ಪ್ರಜ್ವಲ್, ಜಾಕ್ಲೀನ್, ತಿಮೊತಿ ರೊಡ್ರಿಗಸ್, ಗಂಗೊಳ್ಳಿ ಕಾನ್ವೆಂಟಿನ ಧರ್ಮಭಗಿನಿಯರು, ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು. ಪಾಲನ ಮಂಡಳಿ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ, ಗ್ಲೋರಿಯಾ ಡಿಸೋಜಾ , ಆಯೋಗಗಳ ಸಂಯೋಜಕಿ ರೆನಿಟಾ ಬಾರ್ಬೆಸ್, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.