ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಯಶಸ್ವಿನಿ ಯೋಜನೆ ಮಾರು ಜಾರಿ ಸಾಧ್ಯತೆ ಬ್ಯಾಲಹಳ್ಳಿ ಗೋವಿಂದಗೌಡ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಸಹಕಾರಿಗಳ ಆರೋಗ್ಯ ರಕ್ಷಣೆಗೆ ನೆರವಾಗುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರುಜಾರಿ ಸಾಧ್ಯತೆ ಹೆಚ್ಚಿದ್ದು , ಈ ಸಂಬಂಧ ಮುಖ್ಯಮಂತ್ರಿಗಳು ರಾಜ್ಯದ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರುಗಳ ಸಭೆ ಕರೆದಿದ್ದಾರೆ ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೦ ೨೧ ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು . ಟೀಕೆಗಳನ್ನು ಮೆಟ್ಟಿ ಕೆಲಸ ಮಾಡೋಣ ಸಹಕಾರಿ ರಂಗದ ಗಂಧವೇ ತಿಳಿಯದವರು ಸ್ವಾರ್ಥ ರಾಜಕೀಯಕ್ಕಾಗಿ ಮಾಡುವ ಟೀಕೆಗಳನ್ನು ಮೆಟ್ಟಿನಿಂತು ಸಾಲ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಂಕಲದೊಂದಿಗೆ ಸಂಘವನ್ನು ಮುನ್ನಡೆಸಿ ಎಂದು ಕರೆ ನೀಡಿದರು . ಸಹಕಾರಿ ವ್ಯವಸ್ಥೆಯಲ್ಲಿ ಎಷ್ಟೇ ಕೆಲಸ ಮಾಡಿದರೂ ಟೀಕಾಕಾರರು ಹೆಚ್ಚು . ಇದರಿಂದ ನಾವು . ಮತ್ತಷ್ಟು ಎಚ್ಚೆತ್ತು ಕೆಲಸ ಮಾಡಲು ಸಹಕಾರಿ ಎಂದ ಅವರು , ಇದು ತಪ್ಪು ಹುಡುಕುವ ಜಾಗವಾಗಿದ್ದು , ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು .
ಸಹಕಾರಿ ರಂಗ ಮುಳ್ಳಿನ ಹಾಸಿಗೆ ಇದ್ದಂತೆ , ಕೆ.ಎಸ್ ಗಣೇಶ್ ಸಹಕಾರ ಸಂಘವನ್ನು ಪ್ರಾಮಾಣಿಕವಾಗಿ ಮುನ್ನಡೆಸಿದ್ದಾರೆ ಎಂದ ಅವರು , ಪತ್ರಕರ್ತರ ಸಂಘವನ್ನು ಮುನಿರಾಜು ಸೇರಿದಂತೆ ಈವರೆಗೂ ಅಧ್ಯಕ್ಷರಾದವರು ಚೆನ್ನಾಗಿ ಮುನ್ನಡೆಸಿದ್ದು , ರಾಜ್ಯದಲ್ಲೇ ಅತಿ ಸುಂದರ ಭವನ ಕಟ್ಟಿದ್ದಾರೆ ಎಲ್ಲರಿಗೂ ಅಭಿನಂದನೆ ಎಂದರು .

ಯಶಸ್ವಿನಿಯೋಜನೆ ಮರುಜಾರಿ ಸಾಧ್ಯತೆ
ಮಾಜಿ ಸಚಿವ ರಮೇಶ್‌ಕುಮಾರ್ ಅವರು ಸರ್ಕಾರಿ ಆಸ್ಪತ್ರೆಗೆ ಪ್ರತಿಯೊಬ್ಬರೂ ಹೋಗಬೇಕೆಂದು ಆಯುಷ್ಕಾನ್ ಕರ್ನಾಟಕ ಯೋಜನೆಗೆ ಮುಂದಾದರು . ಆದರೆ ಇಂದು ಉತ್ತಮ ಚಿಕಿತ್ಸಾ ಸೌಲಭ್ಯಕ್ಕೆ ಯಶಸ್ವಿನಿ ಯೋಜನೆಯೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು , ಮರು ಜಾರಿಯಾಗುವ ಸಾಧ್ಯತೆ ಇದೆ ಎಂದರು . ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು , ಜಿಲ್ಲಾ ಪತ್ರಕರ್ತರ ಸಹಕಾರ ಸಂಘ ರಾಜ್ಯದಲ್ಲೇ ೨ ನೇ ಸ್ಥಾನ ಪಡೆದಿದೆ .೧೪ ವರ್ಷಗಳಿಂದ ಗಣೇಶ್ ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ . ಈ ವಾರ್ಷಿಕ ಮಹಾಸಭೆಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು .

೨.೬೮ ಲಕ್ಷರೂಗಳ ನಿವ್ವಳ ಲಾಭ – ಗಣೇಶ್
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ . ಲಕ್ಕಪರಿಶೋಧನಾ ವರದಿ ಮಂಡಿಸಿ , ೨೦೦೭ ರಲ್ಲಿ ಆರಂಭಗೊಂಡ ಸಂಘದಲ್ಲಿ ೨೯೩ ಮಂದಿ ಷೇರುದಾರರಿದ್ದು . ಷೇರು ಹಣ . ಸದಸ್ಯರು ನಿವೇಶನಕ್ಕಾಗಿ ಕೂಡಿಟ್ಟ ಹಣ ಸೇರಿ ಡಿಸಿಸಿ ಬ್ಯಾಂಕಿನಲ್ಲಿ ೬೦.೩೧೧೮ ರೂಗಳಿದ್ದು , ೨.೬೮೫೫೧ ರೂ ವಳ ಲಾಭ ಗಳಿಸಿದೆ ಎಂದು ತಿಳಿಸಿದರು .
ಸಾಲದ ಪ್ರಮಾಣ ೨೫ ಸಾವಿರಕ್ಕೆ ಏರಿಕೆ
ಸಂಘ ಈವರೆಗೂ ತನ್ನ ಸದಸ್ಯರಿಗೆ ೨೦ ಸಾವಿರ ಸಾಲ ನೀಡುತ್ತಿದ್ದು , ಇದೀಗ ಮರುಪಾವತಿಯಲ್ಲಿನ ಪ್ರಾಮಾಣಿಕತೆ ಪರಿಗಣಿಸಿ ಇದೀಗ ೨೫ ಸಾವಿರಕ್ಕೆ ಏರಿಸಲು ತೀರ್ಮಾನಿಸಿದೆ ಎಂದಾಗ ಸಭೆ ಅನುಮೋದಿಸಿತು . ಕಾರ್ಯದರ್ಶಿ ಗಂಗಾಧರ್ ಸೇರಿದಂತೆ ಯಾವುದೇ ವೇತನಗೌರವಧನವಿಲ್ಲದೇ ಕೆಲಸ ಮಾಡಿದ್ದು , ಒಂದು ಪೈಸೆಯೂ ವೆಚ್ಚ ಮಾಡಿಲ್ಲ ಎಂದರು . ಇದೇ ಸಂದರ್ಭದಲ್ಲಿ ಆಯುಷ್ಯಾನ್ಸ್ ಕರ್ನಾಟಕ ಯೋಜನೆಯಿಂದ ಹೆಚ್ಚೇನೂ ಲಾಭವಾಗಿಲ್ಲ , ಸರ್ಕಾರ ಸಹಕಾರ ರಂಗದ ಸದಸ್ಯರಿಗಾಗಿ ಇರುವ ಯಶಸ್ವಿನಿಯೋಜನೆ ಮರುಜಾರಿ ಮಾಡಬೇಕು ಎಂದು ಮನವಿ ಮಾಡಿದರು . ಕೋವಿಡ್ ಸಂದರ್ಭದಲ್ಲಿ ಸಂಘದಿಂದ ಚಿಕ್ಕಬಳ್ಳಾಪುರದ ಸದಸ್ಯರಿಗೆ ದಿನಸಿ ಕಿಟ್ ನೀಡಿದ್ದು , ಕೋಪಡ್ ಜಾಗೃತಿ ಮೂಡಿಸಿದ್ದು ಮತ್ತಿತರ ಕಾರ್ಯಗಳನ್ನು ಸ್ಮರಿಸಿಕೊಂಡರು . ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ , ಕೋವಿಡ್ ಆತಂಕದ ನಡುವೆ ಸ್ವಲ್ಪ ಹಿನ್ನಡೆಯಾಗಿದ್ದರೂ , ಸಂಘ ಸದಸ್ಯರಿಗೆ ನೆರವು ನೀಡುತ್ತಲೇ ಬಂದಿದೆ . ಸಂಘ ಕ್ರಿಯಾಶೀಲವಾಗಿದ್ದು , ಪತ್ರಕರ್ತರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮುಂದುವರೆದಿದೆ ಎಂದರು . ಸಹಕಾರ ಸಂಘದ ನಿರ್ದೇಶಕ ಹಾಗೂ ಪತ್ರಕರ್ತರ ಸಂಘದ ಖಜಾಂಚಿ ಎ.ಜಿ , ಸುರೇಶ್‌ಕುಮಾರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್ , ಹಿರಿಯ ಪತ್ರಕರ್ತ ಎಂ.ಜಿ. ಪಾಕರ್‌ , ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಎಸ್.ಮುರಳೀಧರ್ , ಬಿ.ಸುರೇಶ್ ಎಸ್.ಎನ್ . ಪ್ರಕಾಶ್ ನಾಗರಾಜಯ್ಯ ನಾರಾಯಣಪ್ಪ . ಪಿ.ಎಸ್ .ವಾಸ್ ಗೋಪಿಕಾ ಮಲ್ಲೇಶ್ , ಎನ್.ಮುನಿಯಪ್ಪ , ಸಿಇಒ ಗಂಗಾಧರ್ ಸೇರಿದಂತೆ ಸಂಘದ ಎರಡೂ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದ ಸದಸ್ಯರು ಹಾಜರಿದ್ದರು.