ಕುಂದಾಪುರ, ಜ. 18: “ಬಹಳಷ್ಟು ರಾಜರು, ಬಹಳಷ್ಟು ನಮ್ಮೊಳೊಗೀನವರೆ ಪವಿತ್ರ ಸಭೆಯನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಪವಿತ್ರ ಸಭೆ ನಾಶ ಆಗಲಿಲ್ಲ. ಪವಿತ್ರ ಸಭೆ ಆರಂಭವಾದದ್ದು ಪೆಂತೆ ಕೋಸ್ತ್ ದಿನದಂದು, ಸ್ಥಾಪಿತವಾದದ್ದು, ಅದು ಪವಿತ್ರ ಆತ್ಮನ ಶಕ್ತಿಯಿಂದ ಆರಂಭಗೊಂಡಿದ್ದು, ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ, ಭರವಸೆಯಿಂದ ಇರಿ, ತಮ್ಮಲ್ಲಿ ಒಳ್ಳೆಯದಾಗುವುದು, ನಾವು ನಮ್ಮ ಮಕ್ಕಳ ಮೇಲೆ ಭರವಸೆ ಇಟ್ಟು ಅವರಿಗಾಗಿ ತ್ಯಾಗ ಮಾಡಿ ಅವರಿಗೆ ನಾವುಸಾಕುತ್ತೇವೆ, ಅದರಂತೆ ನಾವು ಬಾಲಯೇಸುವಿನಲ್ಲಿ ಭರವಸೆ ಇಟ್ಟು ಪ್ರಾರ್ಥಿಸೋಣ. ಭರವಸೆ ಇಲ್ಲದೆ ನಾವು ಈ ಜಗತ್ತಿನಲ್ಲಿ ಜೀವಿಸಲು ಸಾಧ್ಯವಿಲ್ಲ. ಯೇಸು ನಮಗೆ ಭರವಸೆ ನೀಡಿದ್ದಾರೆ, ದೇವರಲ್ಲಿ ಭರವಸೆ ಹೆಚ್ಚಿಸೋಣ ಅದರಂತೆ ಬಾಲಯೇಸು ನಮಗೆ ಅವರ ಅಶಿರ್ವದಗಳು ಪ್ರಾಪ್ತಿಯಾಗುತ್ತವೆ, ಇದು ೨೦೨೫ ನೇ ಕ್ರಿಸ್ತ ಜಯಂತಿ, ಭರವಸೆಯ ಯಾತ್ರಿಕರಾಗಿ ನಾವು ಮುನ್ನೆಡೆಯೋಣ’ ಎಂದು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅಂ।ವಂ। ಮ್ಯಾಕ್ಸಿಮ್ ನೊರೊನ್ಹಾ ಸಂದೇಶ ನೀಡಿದರು.
ಅವರು ಕೊಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ಬಾಲ ಯೇಸುವಿನ ವಾರ್ಷಿಕ ಹಬ್ಬದಂದು (18-01-2025) ಪ್ರಧಾನ ಯಾಜಕರಾಗಿ ಪವಿತ್ರ ಬಲಿದಾನ ಅರ್ಪಿಸಿ ಸಂದೇಶ ನೀಡಿದರು.
ಈ ಬಾಲಯೇಸುವುನ ಮಹಾ ಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನ ಅ|ವಂ|ಪೌಲ್ ರೇಗೊ, ಕಾರ್ಮೆಲ್ ಧರ್ಮಗುರುಗಳಿಗೆ ಹಬ್ಬದ ಶುಭ ಕೋರಿದರು. ಕುಂದಾಪುರ ವಲಯದ ಇಗರ್ಜಿಗಳ ಧರ್ಮಗುರುಗಳು, ಕಾರ್ಮೆಲ್ ಪಂಗಡದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಹಲವು ಕಾನ್ವೆಂಟಿನ ಧರ್ಮಭಗಿನಿಯರು, ಮತ್ತು ಭಕ್ತಾಧಿಗಳು ಹಾಜರಿದ್ದರು.
ಈ ಹಬ್ಬದ ವಂ।ವಿಲ್ಫ್ರೆಡ್ ಫ್ರ್ಯಾಂಕ್ ಮತ್ತು ಬ್ರದರ್ ಪ್ರಕಾಶ್ ದಿಸೋಜಾ ಪಂಗಡದಿಂದ ತಯಾರಿಗಾಗಿ 3 ದಿನಗಳ ಧ್ಯಾನ ಕೂಟವನ್ನು ಎರ್ಪಡಿಸಲಾಗಿತ್ತು. ಹಬ್ಬದ ಆರಂಭದ ಸೂಚಕವಾಗಿ ಧ್ವಜವನ್ನು ಎರಿಸಲಾಗಿದ್ದು, ಹಬ್ಬ ಮುಗಿದ ನಂತರ ಗೌರವ ಪೂರ್ವಕವಾಗಿ ಇಳಿಸಲಾಯಿತು.
ಹಬ್ಬದ ಬಲಿದಾನಕ್ಕೆ ಕಾರ್ಮೆಲ್ ಗಾಯನ ಪಂಗಡದವರು, ಭಕ್ತಿಗೀತೆಗಳಿಂದ ಸಹಕರಿಸಿದರು. ಕಟ್ಕೆರೆ ಬಾಲಯೇಸುವಿ ಆಶ್ರಮದ ವಂ।ಜೋ ತಾವ್ರೊ, ವಂ।ಜೋಸ್ವಿ ಸಿದ್ದಕಟ್ಟೆ ಉಪಸ್ಥಿತರಿದ್ದರು, ಕಟ್ಕೆರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ|ಪ್ರವೀಣ್ ಪಿಂಟೊ ವಂದಿಸಿ ಶುಭ ಹಾರೈಸಿದರು.