

ಕುಂದಾಪುರ,ನ.27: 454 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 27 ರಂದು ‘ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಕುಂದಾಪುರ ರೋಜರಿ ಚರ್ಚಿನ ಈ ಹಿಂದಿನ ಪ್ರಧಾನ ಧರ್ಮಗುರುಗಳಾದ ವಂ। ಅ|ವಂ|ಸ್ಟ್ಯಾನಿ ತಾವ್ರೊ “ರೋಜರಿ ಚರ್ಚ್ ಒಂದು ಪುರಾತನ ಚರ್ಚ್ ಆಗಿದ್ದು, ಇದಕ್ಕೆ ದೊಡ್ಡ ಇತಿಹಾಸ ಇದೆ, 1570 ರಲ್ಲಿ ಪೊರ್ಚುಗೀಸರು ಕೋಟೆ ಬಾಗಿಲು ಎಂಬಲ್ಲಿ ಇದನ್ನು ಸ್ತಾಪಿಸಿದರು. ಅಲ್ಲಿಂದ ಅಂದಿನ ರಾಜಕೀಯ ವಿದ್ಯಾಮಾನಗಳಿಂದ ಕೆಲವು ಸಲ ಸ್ಥಳಾಂತರಗೊಂಡು ಈಗ ಸುಮಾರು ವರ್ಷಗಳಿಂದ ಇಲ್ಲಿ ಬಂದು ನಿಂತಿದೆ, ಎಂದು ಸವಿಸ್ತಾರವಾಗಿ ಕುಂದಾಪುರ ಚರ್ಚಿನ ಇತಿಹಾಸ ತಿಳಿಸಿದರು. ಈ ಚರ್ಚ್ ಹಲವು ಇಗರ್ಜಿಗಳ ತಾಯಿ ಎಂದು ತಿಳಿಸುತ್ತಾ, ಇಲ್ಲಿನ ಜನರು ಚರ್ಚಿನ ಪೋಷಕಿ ರೋಜರಿ ಮಾತೆಯ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿದ್ದಾರೆ, ಕ್ರೈಸ್ತರಲ್ಲದೆ ಇತರ ಧರ್ಮದವರು ಹಿಂದಿನಿಂದಲು ಭಕ್ತಿ ಇಟ್ಟುಕೊಂಡಿದ್ದಾರೆ, ನಾವು ರೋಜರಿ ಮಾತೆ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಎಂತಂತಹ ದೊಡ್ಡ ಜನರು ಕೂಡ ರೋಜರಿ ಮಾತೆ ಮೇಲೆ ನಂಬಿಕೆ ಇಟ್ಟುಕೊಂಡು ಜಪಮಾಲೆಯ ಪ್ರಾರ್ಥನೆಯನ್ನು ಮಾಡುತ್ತಾರೆ, ವಿಜ್ನಾನಿ ಲೂಯಿ ಪಾಶ್ಚರ್ ಕೂಡ ಜಪಮಣಿ ಪ್ರಾರ್ಥನೆಯನ್ನು ಮಾಡುತಿದ್ದರು. ಮೇರಿ ಮಾತೆ ದೇವರಲ್ಲಿ ಅಪಾರ ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡವಳು, ನಿನ್ನ ಇಚ್ಚೆಯಂತೆ ಆಗಲಿ ಎಂದು ದೇವರಲ್ಲಿ ಜೀವನವಿಡಿ ದೇವರ ಇಚ್ಚೆಯಂತೆ ನಡೆದುಕೊಂಡವಳು, ಹಾಗೆಯೇ ಈ ಹಬ್ಬದ ಸಂದೇಶದಂತೆ ‘ದೇವರ ಇಚ್ಚೆಯಂತೆ ಬಾಳಲು ಮೇರಿ ಮಾತೆ ನಮ್ಮನ್ನು ಕರೆ ನೀಡುತ್ತಾಳೆ’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಸಪೌಲ್ ರೇಗೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯಗಳನ್ನು ನೀಡಿ ಮತ್ತು ಧನ್ಯವಾದಗಳನ್ನು ಅರ್ಪಿಸಿದರು, ಗಂಗೊಳ್ಳಿ ಚರ್ಚಿನ ಧರ್ಮಗುರು ವಂ| ತೋಮಸ್ ರೋಶನ್ ಡಿಸೋಜಾ ಧರ್ಮಗುರುಗಳಿಗೆ ಶುಭಾಷಯ ಅರ್ಪಿಸುತ್ತಾ, ಉಡುಪಿ ಜಿಲ್ಲೆಯಲ್ಲೆ ಕುಂದಾಪುರ ಚರ್ಚ್ ಐತಿಹಾಸಿಕವಾಗಿ ಕೇಂದ್ರಬಿಂದುವಾಗಿದೆ, ಕುಂದಾಪುರ ವಲಯ ಪ್ರಧಾನರಾದ ಅ|ವಂ|ಪೌಲ್ ರೇಗೊ ನಮ್ಮನೆಲ್ಲ ಉತ್ತಮ ರೀತಿಯಲಿ ಮುನ್ನಡೆಸಿಕೊಂಡು ಹೋಗುತಿದ್ದಾರೆ’ ಎಂದು ಅವರಿಗೆ ಎಲ್ಲ ಧರ್ಮಗುರುಗಳ ಪರವಾಗಿ ಶುಭಾಷಯ ಕೋರಿದರು.ಹಬ್ಬದ ಪೋಷಕರಾದ ಟೈರನ್ ಸುವಾರಿಸ್, ಜಾಸ್ನಿ ಡಿಆಲ್ಮೇಡಾ, ಎಲಿನಾ ಪಾಯ್ಸ್, ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೇ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.

























































































































