ಕುಂದಾಪುರ, ಜ.15: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 333 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಧರ್ಮಗುರುರುಗಳಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಸಂ. ಜೋಸೆಫ್ ವಾಜ್ ಕೆನರಾದಾಂತ್ಯ ಯೇಸು ಕ್ರಿಸ್ತರ ಬೋಧನೆ ಮಾಡಿ, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಅದ್ಬುತ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು ಕಣ್ಣಾರೆ ಕಂಡಿದ್ದರು. ಇದರ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೋಲಿಕರಲ್ಲಿ ಅತ್ಯುನ್ನತ್ತ ಸಂತ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 14 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿದ ಉದ್ಯಾವರ ಚರ್ಚಿನ ಧರ್ಮಗುರು ಲೀಯೊ ಪ್ರವೀಣ್ ಡಿಸೋಜಾ “ನಾವು ಯೇಸು ಕ್ರಿಸ್ತರ ಅನುಯಾಯಿಗಳಾಗಿ ಪಾಪದಲ್ಲಿ ಬೀಳಬಾರದು, ನಾವು ಸಮಾಜದ ಬೆಳಕಾಗಬೇಕು, ಇದಕ್ಕಾಗಿಯೇ ನಾವು ಶ್ರಮಿಸಬೇಕು, ಇದುವೇ ನಿಜವಾದ ಕ್ರಿಸ್ತರ ಸಂದೇಶ, ಹೀಗೆ ಶ್ರಮಿಸುವರಿಗೆ ಕಶ್ಟಗಳು ದೊರಕುತ್ತವೆ, ಆದರೆ ಇವರೇ ಭಾಗ್ಯಶಾಲಿಗಳು, ಅವರಿಗೆ ಸ್ವರ್ಗ ಲಭಿಸುವುದು. ಸಂ. ಜೋಸೆಫ್ ವಾಜರು ಕ್ರಿಸ್ತರ ನೆರಳಲ್ಲಿ ಅವರ ಪೂರ್ಣ ಜೀವನ ಸೆವೆಸಿದರು. ಸೆವೆಸುತ್ತಾ ಮರಣ ಹೊಂದಿದರು, ಎಷ್ಟೇ ಕಶ್ಟ ಬಂದರು ಅವರು ಕಂಗಾಲು ಆಗಲಿಲ್ಲ. ದೇವರ ರಾಜ್ಯಕ್ಕಾಗಿ ತ್ಯಾಗದ ಜೀವನ ಸಾರಿದರು. ಅವರ ಜೀವನ ನಮಗೆ ಪ್ರೇರಣೆಯಾಗಬೇಕು. ಹೇಗೆ ಸಂತ ಸಂ. ಜೋಸೆಫ್ ವಾಜ್ ಪ್ರಾರ್ಥನ ಭರಿತ ಜೀವನ ನೆಡೆಸಿದರೋ, ಹಾಗೇ ನಾವು ಕೂಡ ಪ್ರಾರ್ಥನ ಭರಿತರಾಗಬೇಕು. ಮನೆಯಲ್ಲಿ ಪ್ರಾರ್ಥನೆ ತಪ್ಪಬಾರದು, ಸುವಾರ್ತೆಯ ಆರಂಭ ನಮ್ಮ ಮನೆಯಲ್ಲಿ, ನಮ್ಮ ಕುಟುಂಬದಲ್ಲಿ ಆರಂಭಿಸಬೇಕು. ಉತ್ತಮ ಜೀವನ ನೆಡೆಸಿ ನಾವೆಲ್ಲ ಪವಿತ್ರ ಸಭೆಯ ಉತ್ತಮ ಸದಸ್ಯರಾಗಬೇಕು ಇದಕ್ಕೆ ಸಂತ ಜುಜೆ ವಾಜರು ನಮಗೆ ಪ್ರೇರಣೆಯಾಗಲಿ” ಎಂದು ಸಂದೇಶ ನೀಡಿದರು.
ಈ ವಾರ್ಷಿಕ ಹಬ್ಬದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ನಾ ಸಹಬಲಿದಾನದಲ್ಲಿ ಭಾಗಿಯಾಗಿದ್ದರು. ಈ ವಾರ್ಷಿಕ ಹಬ್ಬದಲ್ಲಿ, ಪಾಲನ ಮಂಡಳಿ ಅಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಲವಾರು ಧರ್ಮಭಗಿನಿಯರು, ಬೇರೆ ಬೇರೆ ಇಗರ್ಜಿಯ ಭಕ್ತರು ಹಾಗೂ ಸ್ಥಳೀಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.
Annual Festival of Celebration at the Zonal Level of Saint Joseph Vaz at Rosary Church, Kundapur
Annual Festival of Celebration at the Zonal Level of Saint Joseph Vaz at Rosary Mata Church, Kundapur
Kundapur, January 15: In Kundapur Rosary Amman Church, 333 years ago, for the first time as an Indian Konkani speaker. While st. Joseph Vaz Whole Canara was teaching Jesus Christ and serving at church in Kundapura, while he was meditating, there was a wonderful incident like Jesus Christ floating in the air to the level of the cross of Jesus Christ hanging high on the wall, which was witnessed by a guest priest. After this he went to Sri Lanka and performed many miracles and received the highest sainthood among Catholics. Her annual festival was celebrated on 14th January at Kundapur Rosary church at the zonal level.
The priest of Udyavara Church who offered the Holy Sacrifice of the annual festival of Saint Joseph Vajra said, “We should not fall into sin as followers of Jesus Christ, we should be the light of the society, this is why we should work hard, this is the true message of Christ, hardships will come to those who work hard, but these are the lucky ones, they will get heaven. st Joseph vaz lived his full life under the shadow of Christ. He died suffering, no matter how hard he suffered, he did not mourn. He preached a life of sacrifice for the kingdom of God. His life should be an inspiration to us. How Saint no. As Joseph Vaz led a prayerful life, so should we. Prayer at home should not be missed, the beginning of the gospel should begin in our home, in our family. Let Saint Joseph vaz inspire us to lead a good life and become a good member of the holy congregation.
In this annual festival, the head priest of the Rosary Church, v.r.fr. Stany Tavro participated in the sacrifice and gave the festal greetings and offered thanks. R.f. Ashwin Aranna, assistant priest of Kundapur church, participated in the co-sacrifice. In this annual festival, Board of Trustees vice President Shalette Rebello, Coordinator of Commissions Prema DiCunha, several nuns, devotees of different churchs and local devotees participated in large numbers.