JANANUDI.COM NETWORK
ಕುಂದಾಪುರ, ಫೆ. 26: “ಹಲವಾರು ವಿದ್ಯುತ್ ದೀಪಳಿದ್ದ ಒಂದು ಸಭಾ ಭವನ ಕೆಲವು ತಿಂಗಳು ಮುಚ್ಚಿದ್ದು, ಒಮ್ಮೇಲೆ ಸಭಾಭವನದ ದೀಪಗಳ ಸ್ವೀಚ್ ಹಾಕಿದರೆ ಅದರಲ್ಲಿ ಕೆಲವು ದೀಪಗಳು, ಬೆಳಕು ನೀಡುವುದಿಲ್ಲ, ಕೆಲವು ಮಿಣುಕುತ್ತವೆ, ಕೆಲವು ಸರಿಯಾಗಿ ಉರಿದು ಬೆಳಕು ನೀಡುತ್ತವೆ. ಬೆಳಕು ನೀಡುವು ದೀಪಗಳೆಂದರೆ, ನಾವು ದೇವರೆ ಮೇಲೆ ಇಟ್ಟಿರುವ ನಂಬಿಕೆ, ಅದೇ ಯೇಸುವಿನ ಬೆಳಕು ನಮ್ಮ ಹ್ರದಯಗಳಲ್ಲಿ ಬೆಳಗುವುದಾಗಿದೆ, ಅದೇ ದೇವರ ಬೆಳಕಿನ ಜೊತೆ ನಾವೆಲ್ಲ ಒಟ್ಟಾಗಿ ದೇವರಡೇ ಪಯಣ ಮಾಡುವುದು, ಅದಕ್ಕಾಗಿ ನಾವು ಎಲ್ಲರ ಜೊತೆ ಸಾಗೋಣ, ಸ್ವರ್ಗಹ ಪಡೇಯೋಣ” ಎಂದು ತಾಂಜೆನೀಯದಲ್ಲಿ ಕಾರ್ಮೆಲ್ ಮಿಷನಿನ ಪ್ರಾಂತೀಯ ಮುಖ್ಯಸ್ಥರಾದ ಅ|ವಂ|ಪ್ರವೀಣ್ ಪ್ರ್ಯಾಂಕ್ ಸಂದೇಶ ನೀಡಿದರು.
ಅವರು ಕೊಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ಬಾಲ ಯೇಸುವಿನ ವಾರ್ಷಿಕ ಹಬ್ಬದಂದು (26-2-22) ಪ್ರಧಾನ ಯಾಜಕರಾಗಿ ಪವಿತ್ರ ಬಲಿದಾನ ಅರ್ಪಿಸಿ “ನಾವೆಲ್ಲ ಜೊತೆಯಾಗಿ ಸ್ವರ್ಗ ರಾಜ್ಯಕ್ಕೆ ತೆರಳಬೇಕು, ಹಾಗಾಗಿ ನಂಬಿಕೆಯ ಜೊತೆ ಬದುಕೋಣ, ಅಧ್ಯಾತ್ಮಿಕತೆ ಬೆಳೆಸಿಕೊಳ್ಳುವುದು ಕೇವಲ ಪೋಪ್ ಸ್ವಾಮಿ, ಬಿಷಪ್, ಯಾಜಕರುಗಳಿಗೆ ಮಾತ್ರವಲ್ಲ ಜನ ಸಾಮನ್ಯರಿಗೆಲ್ಲರ ಜವಾಬ್ದಾರಿಯಾಗಿದೆಯೆಂದು ಪೋಪ್ ಸ್ವಾಮಿಗಳು ಹೇಳುತ್ತಾರೆ. ಎಲ್ಲರು ಅಧ್ಯಾತ್ಮ ಪಯಣದ ಜೊತೆ ಸಾಗೋಣ.
ಯೇಸು ಕ್ರಿಸ್ತರು ಎಲ್ಲರನ್ನು ಪ್ರೀತಿಸಿದರು. ಅವರ ದ್ರಷ್ಟಿಯಲ್ಲಿ ಎಲ್ಲರೂ ಸಮಾನರು, ಮೇಲು ಕೀಳಿಲ್ಲ, ಭೇದಭಾವವಿಲ್ಲಾ, ಯೇಸು ಸ್ವಾಮಿ ನಮ್ಮಿಂದ ಬಯಸುವುದೆ ಇದೇ ಆಗಿದೆ. ಅದರಂತೆ ನಾವು ನಡೆಯೋಣ” ಎಂದು ತಿಳಿಸಿದರು.
ಈ ಬಾಲಯೇಸುವುನ ಮಹಾ ಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಭಾಗವಹಿಸಿ ಕಾರ್ಮೆಲ್ ಧರ್ಮಗುರುಗಳಿಗೆ ಹಬ್ಬದ ಶುಭ ಕೋರಿದರು. ಕುಂದಾಪುರ ವಲಯದ ಇಗರ್ಜಿಗಳ ಧರ್ಮಗುರುಗಳು, ಕಾರ್ಮೆಲ್ ಪಂಗಡದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಹಲವು ಕಾನ್ವೆಂಟಿನ ಧರ್ಮಭಗಿನಿಯರು, ಮತ್ತು ಭಕ್ತಾಧಿಗಳು ಹಾಜರಿದ್ದರು. ಬಲಿದಾನಕ್ಕೆ ಕುಂದಾಪುರ ಮತ್ತು ಕೊಟೇಶ್ವರ ಚರ್ಚಿನ ಗಾಯನ ಪಂಗಡದವರು, ಭಕ್ತಿಗೀತೆಗಳಿಂದ ಸಹಕರಿಸಿದರು.
ಕೊಟೇಶ್ವರ ಇಗರ್ಜಿಯ ಧರ್ಮಗುರು ವಂ|ಸಿರಿಲ್ ಮಿನೇಜೆಸ್, ಕಟ್ಕರೆಯ ಸಹಾಯಕ ಧರ್ಮಗುರು ದೀಪ್ ಫೆರ್ನಾಂಡಿಸ್ ಉಪಸ್ಥಿತರಿದ್ದರು, ಕಟ್ಕೆರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ|ಅಲ್ವಿನ್ ಸಿಕ್ವೇರಾ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿ ಎಲ್ಲರನ್ನು ವಂದಿಸಿದರು.