ಕುಂದಾಪುರ, ಜ.15: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 332 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಜೋಸೆಫ್ ವಾಜ್ ಕೆನರಾದಾಂತ್ಯ ಯೇಸು ಕ್ರಿಸ್ತರ ಬೋಧನೆ ಮಾಡಿ, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿ ದ್ಯಾನ ಮಗ್ನರಾಗಿದ್ದ ಅದ್ಬುತ ನಡೆದಿತ್ತು. ಅದ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೊಲಿಕರಲ್ಲಿ ಅತ್ಯುನ್ನತ್ತ ಸಂದ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 14 ರಂದು ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದಂದು ಮಂಗಳೂರು ದೆರೆಬೈಲ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಮಾರ್ಟಿಸ್ ಪವಿತ್ರ ಬಲಿದಾನವನ್ನು ಅರ್ಪಿಸಿ “ಸಂತ ಜೋಸೆಫ್ ವಾಜ್ ಕ್ರಿಸ್ತನ ನೀಜ ಸೇವಕಾನಾಗಿದ್ದರು, ಅವರೊಬ್ಬ ರಾಜಿ ಸಂಧಾನದ ದೂತ’ ಎಂದು ತಿಳಿಸಿ “ಸಂತ ಜೋಸೆಫ್ ವಾಜರು ಕುಂದಾಪುರ ಕೇಂದ್ರವನ್ನಾಗಿಟ್ಟುಕೊಂಡು ಕುಂದಾಪುರ ವಲಯದಲ್ಲಿ (ಅಂದಿನ ಕಾಲದಲ್ಲಿ ಮಂಗಳೂರು ಮತ್ತು ಕುಂದಾಪುರ ಎರಡೇ ವಲಯಗಳಿದ್ದವು) ಸೇವೆ ನೀಡಲು ಬಂದ ಸಮಯದಲ್ಲಿ ಇಲ್ಲಿನ ಪರಿಸ್ಥಿತಿ ಸರಿಯಾಗಿರಲಿಲ್ಲ, ಪೋರ್ಚುಗೀಸರ ರಾಜನ ಪಂಗಡ, ಮತ್ತೊಂದೆಡೆ ಸರ್ವೊಚ್ಚ ಗುರು ಪೋಪ್ ಇವರ ಪಂಗಡ ಎಂದು ಕ್ರೈಸ್ತರು ಕಠಿಣ ಪರಿಸ್ಥಿಯಲ್ಲಿ ಇದ್ದರು, ಅವಾಗ ಪೋಪ್ ಪಂಗಡ ಮುಖ್ಯಸ್ಥರಲ್ಲಿ ನನಗೆ ಕ್ರಿಸ್ತನ ಸೇವೆ ಮಾಡುವುದೇ ಮುಖ್ಯ ಎಂದು ಅವರಿಗೆ ವೀಧೆಯರಾಗಿ ಮಹತ್ತರ ಸೇವೆ ನೀಡುತ್ತಾರೆ. ಮುಂದೆ ಪೋಪ್ ಮತ್ತು ಪೋರ್ಚುಗೀಸರ ರಾಜರ ವಿವಾದ ತಣ್ಣಗೆ ಆಗಲು ಕಾರಣರಾಗಿ, ಕೆನರಾದಲ್ಲಿರುವ ಎಲ್ಲಾ ಕ್ರೈಸ್ತರಿಗೆ ಧಾರ್ಮಿಕ ಸೇವೆ ಸಿಗುವಂತೆ ಮಾಡಿದ ಶ್ರೇಷ್ಠ ಧರ್ಮಗುರುಗಳು. ಅವರು ಕುಂದಾಪುರದ ಆಸು ಪಾಸು ಸೇವೆ ನೀಡುತ್ತಿರುವಾಗ ಕಾಲ್ನಡಿಗೆಯಲ್ಲಿ ನಡೆದಾಡಿದ ಈ ಕುಂದಾಪುರದ ಸ್ಥಳ ಪವಿತ್ರವಾದುದು. ಇಂತಹ ಮಾಹಾನ ಸಂತರು ನಿಮ್ಮ ಇಗರ್ಜಿಯ ಧರ್ಮಗುರುಳಾಗಿದ್ದವರೆಂದು ನೀವು ತುಂಬಾ ಹೆಮ್ಮೆ ಪಟ್ಟುಕೊಳ್ಳ ಬೇಕೆಂದು’ ಅವರು ಸಂದೇಶ ನೀಡಿದರು.
ಈ ವಾರ್ಷಿಕ ಹಬ್ಬದಲ್ಲಿ ಪಿಯುಸ್ ನಗರ್ ಇಗರ್ಜಿಯ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ, ತಲ್ಲೂರು ಇಗರ್ಜಿಯ ಧರ್ಮಗುರು ವಂ|ಎಡ್ವಿನ್ ಡಿಸೋಜಾ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ಹಾ ಸಹಬಲಿದಾನದಲ್ಲಿ ಭಾಗಿಯಾಗಿದ್ದರು. ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಈ ವಾರ್ಷಿಕ ಹಬ್ಬದಲ್ಲಿ, ಹಲವಾರು ಧರ್ಮಭಗಿನಿಯರು ವಲಯದ ಭಕ್ತರು, ಸ್ಥಳೀಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.