ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕಳೆದ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ ಕೋಲಾರ ರೋಟರಿ ಸೆಂಟ್ರಲ್ ವಿವಿಧ ಬಹುಮಾನ ನೀಡಿ ಪುರಸ್ಕರಿಸಲಾಗಿದೆ.
ಬೆಂಗಳೂರಿನಲ್ಲಿ ರೋಟರಿವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರೋಟರಿ ರಾಜ್ಯಪಾಲರು ಮತ್ತು ವಿವಿಧ ಗಣ್ಯರು ಈ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದ್ದಾರೆ.
ಕೋಲಾರ ರೋಟರಿ ಸೆಂಟ್ರಲ್ 2020-21 ನೇ ಸಾಲಿನಲ್ಲಿ ರೋಗಗಳ ತಡೆಗೆ ಶ್ರಮಿಸಿರುವುದು, ರೋಗಗಳಿಗೆ ಚಿಕಿತ್ಸೆ ಕಲ್ಪಿಸುವುದು, ಪರಿಸರ ನಿರ್ವಹಣೆ, ಕೃಷಿ ಸಂಬಂ„ತ ಕಾರ್ಯಕ್ರಮಗಳು, ಕೋವಿಡ್19 ನಿರ್ವಹಣೆ, ರಕ್ತದಾನ ಶಿಬಿರಗಳ ಆಯೋಜನೆ, ಪಲ್ಸ್ ಪೊಲಿಯೋ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಗಮನಿಸಿ ಈ ಕ್ಷೇತ್ರಗಳಲ್ಲಿ ನೀಡುವ ಪ್ರತ್ಯೇಕ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ತಮಗೆ ದೊರೆತ ಒಂದು ವರ್ಷದ ಅವಧಿಯಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್ ನಾಯಕತ್ವದಡಿ ನಡೆಸಿದ ಈ ಸೇವಾ ಕಾರ್ಯಗಳನ್ನುಗಮನಿಸಿ ಕೋಲಾರ ರೋಟರಿ ಸೆಂಟ್ರಲ್‍ಗೆ ಅತ್ಯುತ್ತಮ ಸೇವಾ ಪ್ರಶಸ್ತಿ ಜೊತೆಗೆ, ಅಧ್ಯಕ್ಷ ಸುಧಾಕರ್‍ಗೂ ಪ್ರತ್ಯೇಕ ವಿಶೇಷ ಪುರಸ್ಕಾರವನ್ನು ನೀಡಿ ಅಭಿನಂದಿಸಲಾಗಿದೆ.
ಕೋಲಾರ ರೋಟರಿ ಸೆಂಟ್ರಲ್ ಜೊತೆಗೆ ನಗರ ಮಟ್ಟದಲ್ಲದ ಕ್ಲಬ್‍ಗಳ ಪೈಕಿ ಕೆಜಿಎಫ್ ರೋಟರಿ ಕ್ಲಬ್ ಉತ್ತಮ ಸೇವೆಸಲ್ಲಿಸುವ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರಿನಲ್ಲಿ ನಡೆದ ರೋಟರಿ ವಾರ್ಷಿಕ ಕಾರ್ಯಕ್ರಮದಲ್ಲಿ ಕೋಲಾರ ರೋಟರಿ ಸೆಂಟ್ರಲ್ ನಿರ್ಗಮಿತ ಅಧ್ಯಕ್ಷ ಎಸ್.ಸುಧಾಕರ್ ಹಾಗೂ ಹಾಲಿ ಅಧ್ಯಕ್ಷರಾಗಿ ಅ„ಕಾರ ಸ್ಪೀಕರಿಸಿರುವ ಸಿಎಂಆರ್ ಶ್ರೀನಾಥ್ ಈ ಎಲ್ಲಾ ಬಹುಮಾನಗಳನ್ನು ಕ್ಲಬ್ ಪರವಾಗಿ ಸ್ಪೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ರೋಟರಿ ಸೆಂಟ್ರಲ್ ನಿರ್ಗಮಿತ ಅಧ್ಯಕ್ಷ, ಕೋಲಾರ ಜಿಲ್ಲೆಯ ಸಾರ್ವಜನಿಕರು ಹಾಗೂ ಕ್ಲಬ್ ಪದಾ„ಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಈ ಸಾಧನೆ ಮಾಡಲಾಗಿದೆಯೆಂದು ವಿವರಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ರೋಟರಿ ಸೆಂಟ್ರಲ್ ಹಾಲಿ ಅಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ತಮ್ಮ ಒಂದು ವರ್ಷದ ಅವಧಿಯಲ್ಲಿ ಅಂತರಾಷ್ಟ್ರೀಯ ಹಾಗೂ ಬೆಂಗಳೂರಿನ ವಿವಿಧ ಕ್ಲಬ್‍ಗಳ ಸಹಯೋಗದಲ್ಲಿ ಮತ್ತಷ್ಟು ಸಾಧನೆ ಮಾಡುವ ಉತ್ಸಾಹ ಈ ಪುರಸ್ಕಾರಗಳನ್ನು ಸ್ಪೀಕರಿಸಿದ ನಂತರ ಬಂದಿದೆಯೆಂದು ತಿಳಿಸಿದ್ದಾರೆ.