

ಶ್ರೀನಿವಾಸಪುರ : ತಾಲೂಕಿನ ಬೈರಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೬ ಸದಸ್ಯರಿದ್ದು ಅದರಲ್ಲಿ ೯ ಸದಸ್ಯರು ಹಾಜರಿದ್ದರು ಇನ್ನುಳಿದ ೭ ಸದಸ್ಯರು ಗೈರುಹಾಜರಾಗಿದ್ದರು.ಈ ಹಿಂದೆ ಅಧ್ಯಕ್ಷರಾಗಿದ್ದ ನೇತ್ರಾವತಿ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಸಂಬಂದಿಸಿದ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಬೈಕೊತ್ತೂರು ಚಿನ್ನ ವೆಂಕಟರವಣ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಚುನಾವಣಾ ಅಧಿಕಾರಿ ಕಲ್ಯಾಣ ಸ್ವಾಮಿ ಘೋಷಿಸಿದರು.
ಮುಖಂಡ ರಘುನಾಥ ರೆಡ್ಡಿ ಮಾತನಾಡಿ ಸರ್ಕಾರದ ಯೋಜನೆಗಳ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾಹಿತಿ ನೀಡಿ ಸರ್ಕಾರದ ಯೋಜನೆಗಳನ್ನು ಪಕ್ಷಾತೀತವಾಗಿ ಹಂಚುವುದರ ಮೂಲಕ ಗ್ರಾಮಪಂಚಾಯತಿಯನ್ನ ಮಾದರಿ ಗ್ರಾಮಪಂಚಾಯತಿಯನ್ನಾಗಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರಪ್ಪ, ಉಪಾಧ್ಯಕ್ಷೆ ಸಲ್ಮಾ ಖಾನಂ, ಸದಸ್ಯ ಚಂದ್ರಶೇಖರ ಬೈಕೊತ್ತೂರು ಬಿ.ಆರ್.ಶಂಕರಪ್ಪ, ದೇವರೆಡ್ಡಿಗಾರಿ ಬ್ಯರೆಡ್ಡಿ, ಹಾಗೂ ಊರಿನ ಗ್ರಾಮಸ್ಥರು ಇದ್ದರು.