ಮೂಡ್ಲಕಟ್ಟೆ, ವಿದ್ಯಾ ಅಕಾಡೆಮಿ ಸ್ಕೂಲಿನ ವಾರ್ಷಿಕೋತ್ಸವವು ಇತ್ತಿಚಿಗೆ ಶಾಲೆಯ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕುಂದಾಪುರದ ಹೆಮ್ಮಾಡಿಯ ಲಕ್ಷ್ಯಾ ಕ್ಲಿನಿಕ್ ವೈದ್ಯರಾಗಿರುವ ಅಮ್ಮಾಜಿ ಪಿ ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಅವರು ತಮ್ಮ ಉದ್ಗಾಟನಾ ಭಾಷಣದಲ್ಲಿ ಶಾಲೆಯ ವಾರ್ಷಿಕೋತ್ಸವವು ಎಳೆಯರಿಗೆ ಜೀವನ ಪರ್ಯಂತ ಸ್ಮರಣೀಯ ಕ್ಷಣಗಳನ್ನು ನೀಡುವ ಅತ್ಯಂತ ಮಹತ್ವದ ದಿನ ಎಂದು ಹೇಳಿದರು. ಶಾಲೆಯು ಮಕ್ಕಳಿಗೆ ಮನೆಯ ವಾತಾವರಣದ ಹೊರತಾಗಿ ಹೊರಗಿನ ವಾತಾವರಣವನ್ನು ಅರಿತುಕೋಳ್ಳಲು ಬಹಳ ಸಹಾಯವಾಗುತ್ತದೆ ಎಂದರು ಮತ್ತು ವಿದ್ಯಾರ್ಥಿಗಳ ಉನ್ನತಿಯನ್ನೆ ದೈರ್ಯವಾಗಿಟ್ಟುಕೊಂಡು ಶಾಲೆಯು ಮುನ್ನಡೆಯುತ್ತಿರುವುದು ಪ್ರಶಂಸನೀಯ ಎಂದರು. ಐ.ಎಂ.ಜೆ ಸಂಸ್ಥೆಗಳ ನಿದೇರ್ಶಕರಾದ ಪ್ರೋಫೆಸರ್ ದೋಮ ಚಂದ್ರಶೇಖರ್ ಮಾತನಾಡಿ ಸಂಸ್ಥೆಯ ಅಧ್ಯಕ್ಷರ ಅವಿರತ ಪ್ರಯತ್ನವನ್ನು ಪ್ರಶಂಶಿಸಿದರಲ್ಲದೇ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆಯ ನಂತರ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸಿದ್ದಾರ್ಥ ಜೆ ಶೆಟ್ಟಿಯವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಹಾಗೂ ಕಲಿಕೆಯು ಮನೋರಂಜನಾತ್ಮಕವಾಗಿ ಸಾಗುವಂತೆ ಪಠ್ಯವನ್ನು ಸಂಯೊಜಿಸಲಾಗಿದೆ ಎಂದರು. ಪೋಷಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸಕ್ಕೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪಾವನಾರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಶ್ರೀಮತಿ ವಿದ್ಯಾರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀಮತಿ ರಷ್ಮಾ ಶೆಟ್ಟಿಯವರು ಶಾಲೆಯ ವಾರ್ಷಿಕ ವರದಿಯನ್ನು ಓದಿದರು. ಶ್ರೀಮತಿ ಪಾವನಾರವರು ವಂದನಾರ್ಪಣೆಗೈದರು. ಸಭಾಕಾರ್ಯಕ್ರಮದ ನಂತರ ಮಕ್ಕಳಿಂದ ಅತ್ಯಾಕರ್ಷಕ ಮನೋರಂಜನಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾ ಅಕಾಡೆಮಿಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕುಮಾರಿ ಫಾತಿಮಾ ನಿರ್ವಹಿಸಿದ್ದರು.