ಕುಂದಾಪುರ, ಡಿ20: ಆಪೊಸ್ತಲಿಕ್ ಕಾರ್ಮೆಲ್ ಎಜುಕೇಶನ್ ಸೊಸೈಟಿ ಮಂಗಳೂರು ಇವರ ಕುಂದಾಪುರದ ಸಂತ ಜೋಸೆಫ್ ಕನ್ನಡ ಮಾದ್ಯಮ ವಿದ್ಯಾಸಂಸ್ಥೆಗಳಾದ ಹಿರಿಯ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕೋತ್ಸವವು ಡಿ.19 ರಂದು ಶಾಲಾ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಭಗಿನಿ ಸುಪ್ರಿಯಾ ಅಧ್ಯಕ್ಷತೆ ವಹಿಸಿ “ನಾವು ಮಾಡುವ ಕೆಲಸ ಪರರಿಗೆ ಸಂತೋಷ ನೀಡಬೇಕು, ನಾವು ಪರರಿಗೆ ಮಾಡುವ ಒಳ್ಳೆತನವೇ ಶಿಕ್ಷಣ. ನಾವು ಪರೋಪಕಾರಿ ಜೀವನ ನೆಡಸಬೇಕು. ನಾವೆಲ್ಲ ದೇವರ ಮಕ್ಕಳೆಂದು ಜೀವಿಸಿದರೆ ಸಮಾಜದಲ್ಲಿ ಶಾಂತಿ ಸಮಾಧಾನ ನೆಲಸುವುದು” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “93 ವರ್ಷಗಳ ಹಿಂದೆ ಕುಂದಾಪುರದ ಧರ್ಮಗುರುಗಳ ಇಚ್ಚೆಯಂತೆ, ಇಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಬಾಷ ದೊರಕದ ಕಾರಣ ಇಲ್ಲಿ ಕಾರ್ಮೆಲ್ ಭಗಿನಿಯರು ಶಾಲೆ ಆರಂಭಿಸಿದರು ಅದರಂತೆ ಇಲ್ಲಿನ ಹೆಣ್ಣುಮಕ್ಕಳಿಗೆ ವಿದ್ಯಾ ದಾನ ಮಾಡುತ್ತಾ ಬಂದಿರುವ ಕಾರ್ಮೆಲ್ ಭಗಿನಿಯರಿಗೆ ಅಭಿನಂದಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶಿರ್ವಚನ ಮಾಡಿದರು.
ಮುಖ್ಯ ಅತಿಥಿಗಳಾದ ಡಾ|ಸಂದೀಪ್ ಶೆಟ್ಟಿ “ನಮ್ಮ ಊರಿನ ಮಾತೆಯರಿಗೆ ಶಿಕ್ಷಣ ನೀಡಿದಕ್ಕಾಗಿ ನಾವು ಇಂದು ಉನ್ನತ ಸ್ಥಾನ, ಪದವಿಗಳನ್ನು ಪಡೆಯುವಂತಾಗಿದೆ. ನಮ್ಮ ಮಕ್ಕಳು ಕನಸು ಕಾಣಬೇಕು, ಬೇರೆ ಬೇರೆ ರೀತಿಯ ಕನಸಗಳನ್ನು ಕಾಣಬೇಕು. ಹೆತ್ತವರು ಮಕ್ಕಳ ಕನಸನ್ನು ಅರಿತುಕೊಳ್ಳಬೇಕು’ ತಿಳಿಸಿದರು. ವಡೇರೋಬಳಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಸುನೀತಾ ಬಾಂಜ್ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡುತ್ತಾ ಕಾರ್ಮೆಲ್ ಸಂಸ್ಥೆಯ ಶಾಲೆಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಇನ್ನೂರ್ವ ಅತಿಥಿ ರೋಟೆರಿಯನ್ ರಾಜು ಪೂಜಾರಿ ಮಾತನಾಡಿದರು.
ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಶಾಲೆಗಳ ವರದಿಯನ್ನು ಪ್ರೊಜೆಕ್ಟರ್ ಮೂಲಕ ಪ್ರಸ್ತೂತ ಪಡಿಸಲಾಯಿತು. ಪ್ರಾರ್ಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಭಗಿನಿ ಪ್ರೇಮಿಕಾ ಸ್ವಾಗತಿಸಿದರು, ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಭಗಿನಿ ಐವಿ ದಾನಿಗಳನ್ನು ಪರಿಚಯಿಸಿದರು. ದಾನಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿಸಿದರು. ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ನಿರೂಪಿಸಿ, ಶಿಕ್ಷಕ ಅಶೋಕ್ ದೇವಾಡಿಗ ವಂದಿಸಿದರು.