ಕೋಲಾರ,ಆ.13: ಹವೇಲಿ ಮೊಹಲ್ಲಾದ ನಿವಾಸಿ ಅಂಜದ್ ಪಾಷರನ್ನು ಬಿನ್ ಅಬ್ದುಲ್ ಬಷೀರ್ ಕರ್ನಾಟಕ ದಲಿತ ಪ್ರಜಾ ಸೇನೆ (ಅ) ಕೋಲಾರ ನಗರ ಘಟಕದ ಅಲ್ಪ ಸಂಖ್ಯಾತರ ವಿಭಾಗಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಮತ್ತು ಜಾಗೃತಿ ಸಮಿತಿ ಸದಸ್ಯ ಡಾ.ಎಂ.ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾವು ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ನೀತಿ ನಿಯಮಗಳನ್ನು ಮೈಗೂಡಿಸಿಕೊಂಡು ನಗರದ ತಳಸಮುದಾಯಗಳ ಮತ್ತು ಶೋಷಣೆಗೆ ಒಳಪಟ್ಟ ಸಮುದಾಯಗಳ ಪರ ಹೋರಾಟಗಳನ್ನು ರೂಪಿಸುವ ಮೂಲಕ ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಡುವ ದಿಸೆಯಲ್ಲಿ ಸಾಗಬೇಕೆಂದು ಸಮಿತಿ ಶುಭ ಹಾರೈಸಿದ್ದಾರೆ.