ನೂತನವಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಡಿಸೋಜಾರವರ ಪದಗ್ರಹಣ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ನೂತನವಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಡಿಸೋಜಾರವರ ಪದಗ್ರಹಣ ಸಮಾರಂಭವು  ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು ನಿಕಟಪೂರ್ವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ನಳಿನಾಕ್ಷಿ ಆಚಾರ್ಯರವರು   ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ತನಗೆ ಸಹಕಾರ ನೀಡಿದ ಮಾಜಿ ಶಾಸಕ ಗೋಪಾಲ ಭಂಡಾರಿಯವರಿಗೆ ಹಾಗೂ ನನ್ನೊಂದಿಗೆ ಸಹಕರಿಸಿದ ಪಕ್ಷದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಾಗು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗರವರು ಮಾತನಾಡಿ ಮಹಿಳಾ ಕಾಂಗ್ರೆಸ್ ಸಂಘಟನೆಯನ್ನು ಪ್ರತೀ ಬೂತ್ ಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಿ ನಾವೆಲ್ಲ ಒಂದಾಗಿ ಸಂಘಟಿಸೋಣ ಎಂದರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಕೋಟ್ಯಾನ್ ಮಾತನಾಡಿ ಮಹಿಳೆಯರು ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ವಿವರಿಸಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಡಿಸೋಜರವರಿಗೆ ಶುಭಹಾರೈಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಮ್ರತ್ ಶೆಣೈರವರು ಪಕ್ಷ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳೆಯರಿಗೆ ಪಕ್ಷ ಕೊಟ್ಟ ಸನ್ಮಾನದ ಬಗ್ಗೆ ವಿವರಿಸಿದರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ ಬಿಜೆಪಿಯ ಆಡಳಿತ ವೈಫಲ್ಯ ಜನರಿಗೆ ಈಗ ಮನದಟ್ಟಾಗುತ್ತಿತ್ತು ಬೀಡಿ ಕಾರ್ಮಿಕ ಮಹಿಳೆಯರು ಸಂಕಷ್ಟ ಮತ್ತು ಬೆಲೆ ಏರಿಕೆಯಿಂದ ರೋಸಿಹೋಗಿರುವ ಸಮಯವನ್ನು ನಮ್ಮ ಪಕ್ಷಕ್ಕೆ ಅನುಕೂಲಕರವಾಗಿ ಬಳಸಿಕೊಂಡು ಪಕ್ಷವನ್ನು ಹೇಗೆ ಸಂಘಟನೆ ಮಾಡಬಹುದು ಎಂದು ವಿವರಿಸಿದರು ಸೇವಾದಳದ ಅಧ್ಯಕ್ಷ ಸುಶಾನ್ ಸುಧಾಕರ್ ಮಾತನಾಡಿ ಸ್ವತಂತ್ರ ಭಾರತದ ಪ್ರಥಮ ಮುಖ್ಯಮಂತ್ರಿ ಸಚೇತ ಕೃಪಲಾನಿ ಹಾಗು ಸ್ವತಂತ್ರ ಭಾರತದ ಪ್ರಥಮ ರಾಜ್ಯಪಾಲ ಸರೋಜಿನಿ ನಾಯ್ಡು ಪ್ರಥಮ ಪ್ರಧಾನಿ ಇಂದಿರಾ ಗಾಂಧಿಯಂತ ಮಹಾನ್ ಮಹಿಳಾ ನಾಯಕಿಯರನ್ನು ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿದೆ ಎಂದರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಸಮಾರಂಭದ ಅಧ್ಯಕ್ಷೆ ಗೀತಾ ವಾಗ್ಲೆ ಅವರು ಮಾತನಾಡಿ ಪಕ್ಷ ನನಗೆ ಕೊಟ್ಟ ಅವಕಾಶಗಳು ಹಾಗೂ ನೂತನವಾಗಿ ಆಯ್ಕೆಯಾದ ಅನಿತಾ ಡಿಸೋಜಾರವರು ತನಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಶುಭ ಹಾರೈಸಿದರು ಸಮಾರಂಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಮತ್ತು ಜಾರ್ಜ್ ಕ್ಯಾಸ್ಟಲಿನೊ ಕೆಪಿಸಿಸಿ ಸಂಯೋಜಕ ಬೆಳ್ತಂಗಡಿ ಉಸ್ತುವಾರಿ ಬಿ ಕೃಷ್ಣಮೂರ್ತಿ ಕಿಸಾನ್ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ವಿ ಶೆಟ್ಟಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಕೋಟ್ಯಾನ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾದ ಮಾಲಿನಿ ರೈ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಅಸ್ಲಾಂ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೇಶ್ ನಯನ್ ಇನ್ನ ಇಂಟಕ್ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಾಂತಿ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಎಸ್ ಟಿ ಅಧ್ಯಕ್ಷರಾದ ಅಣ್ಣಪ್ಪ ನಕ್ರೆ ಎಂಪಿಎಂಸಿ ಸದಸ್ಯರಾದ ಜಯರಾಮ ಆಚಾರ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ಪ್ರದೀಪ್ ಬೇಲಾಡಿ ಜಿಲ್ಲಾ ಅಲ್ಪಸಂಖ್ಯಾತ ಸಮಿತಿಯ ಉಪಾಧ್ಯಕ್ಷ ಆರಿಫ್ ಕಲ್ಲೊಟ್ಟೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಪವನ್ ಕುಮಾರ್ ಪುರಸಭಾ ಸದಸ್ಯರಾದ ಪ್ರತಿಮಾ ರೆಹಮತ್ ಪ್ರಭ ವಿನ್ನಿ ಬೊಲ್ಟ್ ಮೆಂಡೋನ್ಸಾ ಮಾಜಿ ಪುರಸಭಾ ಸದಸ್ಯರಾದ ನವೀನ್ ದೇವಾಡಿಗ ವಿವೇಕಾನಂದ ಶೆಣೈ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಫ್ಲೋರಾ ಮೆಂಡೋನ್ಸಾ ಐ.ಟಿ ಸೆಲ್ ಅಧ್ಯಕ್ಷರಾದ ಸತೀಶ್ ಕಾರ್ಕಳ ಪಂಚಾಯತ್ ಸದಸ್ಯರು ಸದಸ್ಯೆಯರು  ಮಾಜಿ ಪಂಚಾಯತ್ ಸದಸ್ಯರು ಸದಸ್ಯೆಯರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು ರೀನಾ ಟೀಚರ್ ಸ್ವಾಗತಿಸಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು ಶೋಭಾ ಅಂಬಾಪ್ರಸಾದ್ ರವರು ಕಾರ್ಯಕ್ರಮ ನಿರೂಪಿಸಿದರು.