JANANUDI.COM NETWORK
ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕು ಎಂದುಕೊಂಡಿದ್ದ ಜೋಡಿಯೊಂದು, ಕೊರೊನಾದ ಕಾರಣ ಪದೇಪದೇ ಹಲವಾರು ನಿಯಮಗಳು ಅಡ್ಡಿಯಾದ ಕಾರಣ ಈ ಜೋಡಿ ಗೂಗಲ್ ಮೀಟ್ ಮೂಲಕ ಮದುವೆಯಾಗುವುದಕ್ಕೆ ತಯಾರಾಗಿದ್ದಾರೆ.
ಪಶ್ಚಿಮ ಬಂಗಾಳದ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಜನವರಿ 24 ರಂದು ಒನ್ ಲೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿಗೆ ವಿನೂತ ಉಪಾಯ ಹೊಳೆದಿದ್ದು, ಈ ಹೊಸ ವಿಧಾನ ಮೊಳಕೆಯೊಡೆದು ಹೆಮ್ಮರವಾಗುವ ಸಾಧ್ಯತೆ ಕಾಣುತ್ತದೆ.
ಈ ನವ ಜೋಡಿಯ ಯೋಜನೆಯಂತೆ, ಇವರು ಆಯ್ದ 450 ಸಂಬಂಧಿಕರ ಸಮ್ಮುಖದಲ್ಲಿ ಗೂಗಲ್ ಮೀಟ್ ಮೂಲಕ ಈ ಜೋಡಿ ಜನವರಿ 24ರಂದು ಸಪ್ತಪದಿ ತುಳಿಯಲಿದ್ದಾರೆ.
ಮತ್ತು ವಿಶೇಷವೆಂದರೆ ಅಂದು ಮದುವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಝೋಮ್ಯಾಟೋ ಮೂಲಕ ಮದುವೆಯ ಊಟ ಕಳಿಸಲು ಕೂಡ ಈ ಜೋಡಿ ಈಗಾಗಲೇ ಎರ್ಪಾಟು ಮಾಡಿದ್ದಾರೆ.