ಆನಗಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಲಾರೆನ್ಸ್ ಡಿಸೋಜಾ,ಉಪಾಧ್ಯಕ್ಷರಾಗಿ ಪ್ರಭಾಕರ ಮೋಗವೀರ

JANANUDI.COM NETWORK


ಕುಂದಾಪುರ, ಫೆ.19: ಆನಗಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವಾಲ್ಟರ್ ಡಿಸೋಜಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪ್ರಭಾಕರ ಮೋಗವೀರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ಫೆಬ್ರವರಿ 19 ರಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮನ್ಯ,ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಗೆ ಮಿಸಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧೆ ಏರ್ಪಟ್ಟು ಪ್ರಭಾಕರ ಮೋಗವೀರ ಮತ್ತು ಮೂಕಾಂಬು ನಾಮ ಪತ್ರ ಸಲ್ಲಿಸಿದರು. ಪ್ರಭಾಕರ 6 ಮತ್ತು ಮೂಕಾಂಬು 2 ಮತಗಳನ್ನು ಪಡೆದರು.
ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಸಂಜೀವ ನಾಯ್ಕ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಂಗಾಧರ ಶೆಟ್ಟಿ,ವಿನೋದ್ ಕ್ರಾಸ್ಟೊ, ಅಂತೋನಿ ಡಿಆಲ್ಮೇಡಾ, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ ಅಂಕದ ಕಟ್ಟೆ, ಸುನೀಲ್ ಹೇರಿಕುದ್ರು, ಗೋಪಾಲ ಕಳಂಜಿ ಉಪಸ್ಥಿತರಿದ್ದರು