ಧರ್ಮ, ಜಾತಿ, ಮತಗಳ ಬೇಧವಿಲ್ಲದೆ ಸೌಹಾರ್ದ ಸಾಮೂಹಿಕ ವಿವಾಹಕ್ಕೆಅರ್ಜಿ ಆಹ್ವಾನ

JANANUDI.COM NETWORK


ಮಂಗಳೂರು,ಎ.20; ಆರ್ಥಿಕವಾಗಿ ತೀರಾ ಹಿಂದುಳಿದಿರುವ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಬಜ್ಪೆ ಝಕರಿಯಾ ಫೌಂಡೇಶನ್ ಜೂನ್ 17ರಂದು ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಂಗಣ ಝರಾ ಆಡಿಟೋರಿಯಂನಲ್ಲಿ ‘ಸೌಹಾರ್ದ ಸಾಮೂಹಿಕ ವಿವಾಹ’ ಸಮಾರಂಭ ಹಮ್ಮಿಕೊಂಡಿದ್ದು, ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಧರ್ಮ, ಜಾತಿ, ಮತಗಳ ಬೇಧವಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ವಧುವಿನ ಕುಟುಂಬಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ದ ವಧುವಿಗೆ ಮದುವೆಯ ವಸ್ತ್ರ, 4 ಪವನ್ ಚಿನ್ನಾಭರಣ ಹಾಗೂ ಮದುವೆಯ ಖರ್ಚನ್ನು ಬಜ್ಪೆ ಝಕರಿಯಾ ಫೌಂಡೇಶನ್ ಭರಿಸಲಿದೆ. ಅನಾಥ, ಅಂಗವಿಕಲ, ಆರ್ಥಿಕ ಹಿಂದುಳಿಕೆ ಹಾಗೂ ಮದುವೆಯ ವಯಸ್ಸು ಮೀರಿರುವ ವಧುವಿಗೆ ಆಧ್ಯತೆ ನೀಡಲಾಗುವುದು.
ಆಯ್ದ ಜೋಡಿಗಳ ಮದುವೆಯನ್ನು ಅವರವರ ಧಾರ್ಮಿಕ ಸಂಪ್ರದಾಯದಂತೆ ನೆರವೇರಿಸುವ ವ್ಯವಸ್ಥೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನಾಂಕವಾಗಿದ್ದು, ಆಸಕ್ತರು ನಿಗದಿತ ಅರ್ಜಿ ನಮೂನೆ ಪಡೆಯಲು ಉಮರ್ ಯು.ಹೆಚ್., ಸಂಚಾಲಕರು, ಸಾಮೂಹಿಕ ವಿವಾಹ ಸಂಘಟನಾ ಸಮಿತಿ, ಬಜ್ಪೆ ಝಕರಿಯಾ ಫೌಂಡೇಶನ್, ಸಿ 24, 2ನೇ ಮಹಡಿ, ಅಲ್ ರಹಬಾ ಪ್ಲಾಝಾ, ಸ್ಟೇಟ್ ಬ್ಯಾಂಕ್ ಬಳಿ, ನೆಲ್ಲಿಕಾಯಿ ರಸ್ತೆ, ಮಂಗಳೂರು–575001 ದೂರವಾಣಿ ಸಂ. 9845054191ನ್ನು ಸಂಪರ್ಕಿಸಬಹುದು ಎಂದು ಬಜ್ಪೆ ಝಕರಿಯಾ ಫೌಂಡೇಶನ್’ನ ಸ್ಥಾಪಕಾಧ್ಯಕ್ಷ ಬಿ.ಝಕರಿಯಾ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.