ಶ್ರೀನಿವಾಸಪುರ : ಕುಡಿಯುವ ನೀರಿನ ಹಭಾವದಿಂದ ಕಂಗಾಲಾಗುತ್ತಿದ್ದ ಗ್ರಾಮಸ್ಥರ ದಾಹ ತೀರಿಸಲು ಮುಂದಾಗಿ ಬೋರ್ ವೆಲ್ ಕೊರಿಸುವ ವೇಳೆ ಪಕ್ಕದ ಜಮೀನಿನ ವಾಸಿಗಳು ಹಲ್ಲೆ ನಡೆಸಿರುವ ಘಟನೆ ಸಂಬಂಧ ರಾಯಲ್ಪಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಮೂಲಗೊಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 10-15 ದಿನಗಳಿಂದ ನೀರಿನ ಹಭಾವ ಹೆಚ್ಚಾಗಿತ್ತು. ಈ ಸಂಬಂಧ ಗ್ರಾಮಸ್ತರು ಹಲವು ಭಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಇನ್ನು ಈ ಸಂಬಂಧ ಗ್ರಾಮದ ಮುಖ್ಯ ರಸ್ತೆ ಹಾಗೂ ಕಾಲುವೆ ಮದ್ಯೆ ಬೋರ್ ವೆಲ್ ಕೊರೆಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಈ ವೇಳೆ ಪಕ್ಕದ ಜಮೀನಿನವರಾದ ಶೇಕರ, ಭಾಸ್ಕರ, ಸುಧಾಕರ, ಶ್ರೀನಾಥ ಹಾಗೂ ಮತ್ತಿತರರು ಈ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಬಾರದೆಂದು ಕೊಳವೆ ಬಾವಿ ಕೊರೆಯದಂತೆ ಅಡ್ಡಿಪಡಿಸಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಸರ್ಕಾರಿ ಜಾಗದಲ್ಲಿ ಕೊಳವೆ ಬಾವಿ ಕೊರೆಯಳು ಯಾಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಮಾತನಾಡಲು ಹೋದವರ ಮೇಲೆ ಇದೇ ಗ್ರಾಮದ ಶಿವರಾಜ, ಚಿನ್ನಕ್ಕ ಹಾಗೂ ಗಂಗುಲಪ್ಪ ಎಂಬುವವರ ಮೇಲೆ ಮಾರಣಾoತಿಕ ಹಲ್ಲೆ ನಡೆಸಿದ ಕಾರಣ ಮೂವರಿಗೂ ತೀವ್ರ ಗಾಯಗಳಾಗಿ ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಸಂಬಂಧ ರಾಯಲ್ಪಾಡು ಪೊಲೀಸರು ಗಾಯಳುಗಳಿಂದ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಕುರಿತು ಗ್ರಾಮಸ್ತ ಶ್ರೀನಿವಾಸ್, ವಾಲ್ಮೀಕಿ ಗುರುಕುಲಪೀಠ ಜಿಲ್ಲಾ ಅಧ್ಯಕ್ಷ ಹರೀಶ್ ನಾಯಕ್, ತಾಲೂಕು ಅಧ್ಯಕ್ಷ ನಾಗರಾಜ್, ಪ್ರದೀಪ್ . ಮುಖಂಡರಾದ ರಾಮಕೃಷ್ಣ, ಶ್ರೀ ರಾಮ್ , ವೆಂಕಟರಾಮ್, ಗ್ರಾಮಸ್ಥರಾದ ಚೌಡಪ್ಪ, ಮಂಜುನಾಥ್, ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂದಿಸುವಂತೆ ಒತ್ತಾಯಿಸಿದ್ದಾರೆ.