ಶ್ರೀನಿವಾಸಪುರ ಪುರಸಭಾ ಸಭಾಂಗಣದಲ್ಲಿಂದು ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ “ಏಳ ಬಳಕೆ ಪ್ಲಾಸ್ಟಿಕ್ ನಿಷೇಧ” ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀನಿವಾಸಪುರ : ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನಕ್ಕೆ ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ಆರ್. ಭಾಸ್ಕರ್ ರವರು ಚಾಲನೆ ನೀಡಿ ಮಾತನಾಡಿ ಕಡಿಮೆ ಉಪಯುಕ್ತತೆ ಮತ್ತು ಪರಿಸರ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿರುವ “ಏಳ ಬಳಕೆಯ ಪ್ಲಾಸ್ಟಿಕ್” ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಸಲುವಾಗಿ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದ ಅವರು ಸರ್ಕಾರವು ಹಲವು ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರವನ್ನಾಗಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್ನಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಹಾಗೂ ಮುಂದಿನ ಪೀಳಿಗೆಗೆ ಆಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಅವರು ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಅನೇಕ ಬಾರಿ ದಂಡವನ್ನು ವಿಧಿಸಿದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ವ್ಯಾಪಾರಸ್ಥರು ತಮ್ಮ ಬಳಿ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ದಿನಾಂಕ: 05-09-2024ರ ವರೆಗೆ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಂಧಿಸಿದ ಮಾನ್ಯ ಅಧ್ಯಕ್ಷರು ಸೆಪ್ಟೆಂಬರ್ 5ನೇ ತಾರೀಖಿನ ವರೆಗೆ ಅಂತಿಮ ಗಡವು ನೀಡಲಾಗಿದ್ದು, ನಂತರ ಯಾರಾದರೂ ನಿಷೇಧಿತ “ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿದರೆ ಗ್ರಾಹಕರಿಗೆ ಮತ್ತು ಅಂಗಡಿ ಮಾಲೀಕರಿಗೆ, ಸಾಗಾಣಿಕೆದಾರರಿಗೆ, ದಾಸ್ತಾನುದಾರರಿಗೆ ದಂಡವನ್ನು ವಿಧಿಸುವುದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಶ್ರೀನಿವಾಸಮರ ಪಟ್ಟಣದಲ್ಲಿರುವ ಟೀ-ಕಾಫೀ ಅಂಗಡಿ, ಬೀದಿ-ಬದಿ ವ್ಯಾಪಾರಿಗಳು, ಚಿಕನ್-ಮಟನ್ ಅಂಗಡಿ, ಹೋಟೆಲ್, ಬೇಕರಿ, ಬಾರ್ ಮತ್ತು ರೆಸ್ಟೋರೆಂಟ್, ಕಲ್ಯಾಣ ಮಂಟಪಗಳಲ್ಲಿ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬಾರದು ಸೂಚನೆ ನೀಡಿದರು.
ಶ್ರೀನಿವಾಸಪುರ ಪಟ್ಟಣದಲ್ಲಿರುವ ಎಲ್ಲಾ ವ್ಯಾಪಾರಸ್ಥರು ಪುರಸಭೆಯಿಂದ ಉದ್ದಿಮೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಲು ತಿಳಿಸಿದ ಅವರು 2024-25ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಸರ್ಕಾರದ ವತಿಯಿಂದ ಶೇ.5% ರಿಯಾಯಿತಿ ಅವಧಿಯನ್ನು ದಿನಾಂಕ:14-09-2024ರ ವರೆಗೆ ವಿಸ್ತರಿಸಿ ಆದೇಶಿಸಿದ್ದು, ಸದರಿ ಅವಕಾಶವನ್ನು ಶ್ರೀನಿವಾಸಮರ ಪಟ್ಟಣದ ಎಲ್ಲಾ ಆಸ್ತಿ ಮಾಲೀಕರು ಸದುಪಯೋಗ ಪಡೆದುಕೊಂಡು ನಿಗಧಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡಿ ಶ್ರೀನಿವಾಸಮರ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮಾನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಕೆ.ಎಸ್. ಸುನೀತಾ, ಮುಖ್ಯಾಧಿಕಾರಿ ವೈ. ಎನ್. ಸತ್ಯನಾರಾಯಣ, ಕಛೇರಿ ವ್ಯವಸ್ಥಾಪಕರಾದ ಜಿ. ನವೀನ್ ಚಂದ್ರ ಆರೋಗ್ಯ ನಿರೀಕ್ಷರಾದ ಕೆ. ಜಿ. ರಮೇಶ್, ಕಂದಾಯಾಧಿಕಾರಿ ವಿ. ನಾಗರಾಜು, ಕಂದಾಯ ನಿರೀಕ್ಷಕ ಎನ್. ಶಂಕರ್ ಪುರಸಭೆ ಸಿಬ್ಬಂಧಿ ಹಾಗೂ ವರ್ತಕರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಶೆಟ್ಟಿ ಹಾಗೂ ವರ್ತಕರು ಸಭೆಯಲ್ಲಿ ಹಾಜರಿದ್ದರು.