JANANUDI.COM NETWORK
ಶಿರಸಿ: ಶಿರಸಿಯಲ್ಲಿ ಮಹಿಳೆಯೊಬ್ಬಳು ಸಾಹಸದಿಂದ ಏಕಾಂಗಿಯಾಗಿ 60 ಅಡಿ ಬಾವಿ ತೋಡಿ ಸುದ್ದಿ ಮಾಡಿದ್ದಾಳೆ. ಜೀವನಕ್ಕೆ ಆಸರೆಗಾಗಿ ತಾನೇ ನೆಟ್ಟಿದ್ದ ತೆಂಗು, ಅಡಕೆ, ಬಾಳೆ, ಗಿಡಗಳು ನೀರಿನ ಕೊರತೆಯಿಂದ ಒಣಗುತ್ತಿರುವುದನ್ನು ನೋಡಲಾರದೆ ಉತ್ತರ ಕನ್ನಡ ಜಿಲ್ಲೆ ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ಗೌರಿ ಚಂದ್ರಶೇಖರ ನಾಯ್ಕ ಏಕಾಂಗಿಯಾಗಿ 8 ಅಡಿ ಅಗಲ, 60 ಅಡಿ ಆಳದ ಬಾವಿ ತೋಡಿ ದಿಟ್ಟ ಸಾಹಸ ಮೆರೆದಿದ್ದಾರೆ.
ಎರಡು ತಿಂಗಳಿಂದ ಮನೆಯ ಹಿಂಬದಿಯ ತೋಟದಲ್ಲಿ ಬಾವಿ ತೋಡುವ ಕಾರ್ಯದಲ್ಲಿ ತೊಡಗಿಕೊಂಡ ಕೊನೆಯ ನಾಲ್ಕು ದಿನದ ಹೊರತಾಗಿ ಯಾರ ಸಹಾಯವನ್ನೂ ಚಾಚದೆ ಒಬ್ಬರೇ ಬಾವಿ ತೋಡಿ ಮುಗಿಸಿದ್ದಾರೆ. ಮಗ ಬಯ್ಯುತ್ತಾನೆ ಎಂದು ಯಾರಿಗೂ ಹೇಳದೆ ಬಾವಿ ತೆಗೆಯುವ ಕಾರ್ಯ ಮುಗಿಸಿ ನಂತರ ಮಗನಿಗೂ ತಿಳಿದು ಮಗನಿಗೆ ಅಚ್ಚರಿ ಮೂಡಿಸಿದ್ದಾರೆ. ತನ್ನ ತವರು ಮನೆಯಾದ ಗಣೇಶನಗರದಲ್ಲಿ ಗೌರಿ ನೆಲೆಸಿ 45 ವರ್ಷಗಳಾದವು. ಅವಳು ಹತ್ತಿರದ ಗ್ರಾಮೀಣ ಭಾಗಕ್ಕೆ ತೆರಳಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತಿದ್ದು ತಮ್ಮ ಮನೆಯ ಸುತ್ತ ಇರುವ ಜಾಗದಲ್ಲಿ ನೆಟ್ಟ150 ಅಡಕೆ ಹಾಗೂ 20 ತೆಂಗಿನ ಸಸಿಗಳು, ಸಸಿಗಳು ನೀರಿಲ್ಲದೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದವು. ಅವುಗಳನ್ನು ರಕ್ಷಿಸುವ ದೃಢ ನಿರ್ಧಾರ ಮತ್ತು ಆತ್ಮ ವಿಶ್ವಾಸದಿಂದ ಬಾವಿ ಕಾರ್ಯ ಆರಂಭಿಸಿದ್ದರು.
ಕಲ್ಲು ಮಿಶ್ರಿತ ಮಣ್ಣಿನಿಂದ ಕೂಡಿದ ಜಾಗದಲ್ಲಿ 8 ಅಡಿ ಅಗಲದ ಬಾವಿಯನ್ನು ದಿನಕ್ಕೆ 3 ಅಡಿಯ ಲೇಕ್ಕದಲ್ಲಿ ಬಾವಿಯಿಂದ ಅಗೆಯಲು ಆರಂಭಿಸಿದ ಗೌರಕ್ಕ ಗುದ್ದಲಿ, ಹಾರೆ, ಚಾಣ, ಸುತ್ತಿಗೆ, ಪಿಕಾಸು, 2 ಕಬ್ಬಿಣದ ಬಕೇಟ್ ಬಳಕೆ ಮಾಡಿದ್ದು ಇದೀ, ಗೌರಿ ಅವರ 2 ತಿಂಗಳ ಬೆಲೆ ಬಾಳುವ ಬೆವರ ಹನಿಯ ಪ್ರತಿಫಲವಾಗಿ 60 ಅಡಿ ಆಳದ ಬಾವಿ ಅಗೆದಿದ್ದು, 7 ಅಡಿ ಜೀವಜಲ ತುಂಬಿದೆ. ವಿಚಿತ್ರೆವೆಂದರೆ ಗಣೇಶ ನಗರ ಸುತ್ತಮುತ್ತಲು 10ಕ್ಕೂ ಹೆಚ್ಚಿನ ಬಾವಿಗಳನ್ನು ತೋಡಿದ್ದರೂ ನೀರಿನ ಸೆಲೆ ಕಾಣಿಸಿರಲಿಲ್ಲ ಆದರೆ ಗೌರಿ ಅವರ ಮೇಲೆ ದೇವರ ಕ್ರಪಾಠಾಕ್ಷದಂತೆ, ಅವರಬೆವರ ಹನಿಗಳು ನೀರಾಗಿ ಮಾರ್ಪಟ್ಟಿದೆ ಎಂಬುದರಲ್ಲಿ ಅನುಮಾನವಿಲ್ಲ.
ಗೌರಿ ದಿನಕ್ಕೆ 200ಕ್ಕೂ ಹೆಚ್ಚು ಸಲ ಹತ್ತಿಳಿದಿದ್ದಾಳೆ. ಇವರಿಗೆ ಒಂದು ಸಲ ಬಾವಿ ಹತ್ತಿಳಿಯಲು ಕೇವಲ 2 ನಿಮಿಷ ಸಮಯ ಸಾಕಾಗಿದಿದೆಯಂತೆ: ಸಾಮಾನ್ಯವಾಗಿ ಬಾವಿ ತೆಗೆಯುವುದಕ್ಕೆ 3ರಿಂದ 4 ಜನ ಬೇಕಾಗುತ್ತದೆ. ಬಾವಿಯ ಕೆಳಗಡೆಯಿಂದ ಮಣ್ಣು ಮೇಲೆತ್ತಲು, ಬಾವಿಯ ಕೆಳಗಡೆ ಮಣ್ಣುತೊದಲ ತೊದಲು ಜನರ ಅವಶ್ಯಕತೆ ಇರುತಿತ್ತು ಆದರೆ ಗೌರಿ, ತಾನೇ ತೋಡಿದ ಮಣ್ಣು ಮೇಲೆತ್ತಲು ದಿನದಲ್ಲಿ 200ಕ್ಕೂ ಹೆಚ್ಚು ಬಾರಿ ಬಾವಿ ಹತ್ತಿಳಿಯುತ್ತಲೆ ಬಾವಿ ತೋಡಿದ್ದರು ಎಂದರೆ ಇದೊಂದು ಅಪರೂಪದ ಸಾಹಸವೇ ಸರಿ.