ಶ್ರೀನಿವಾಸಪುರ : ತಾಲೂಕಿನ ಯಲ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ ಹಾಗೂ ಚರಂಡಿ ಸ್ವಚ್ಛತೆ ಇವುಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಪಿ. ಶ್ರೀನಿವಾಸರೆಡ್ಡಿ ತಿಳಿಸಿದರು.
ಶ್ರೀನಿವಾಸಪುರ ತಾಲೂಕಿನ ಯಲ್ಡೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡುತ್ತಾ, ಇಂದಿನ ಸಭೆಯಲ್ಲಿ 2024-25ನೇ ಸಾಲಿನ ಎಮ್ ಎನ್ ಆರ್ ಇ ಜಿ ಎಯ ಅಂದಾಜು ಕ್ರಿಯಾಯೋಜನೆಗೆ ಹಾಗೂ ಗ್ರಾಮನೀರು ಮತ್ತು ನೖರ್ಮಲ್ಯ ಸಮಿತಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಗ್ರಾಮದ ಪೆದ್ದಕುಂಟೆಯ ಸ್ವಚ್ಛತೆ ಕಾಮಗಾರಿ ಮತ್ತು ಈಗಾಗಲೇ ನಿರ್ಮಿಸಿರುವ ಶೌಚಾಲಯವನ್ನು ದುರಸ್ತಿ ಮಾಡಿ ಸಾರ್ವಜನಿಕ ಅನುಕೂಲಕ್ಕೆ ಒದಗಿಸಿಕೊಡಲಾಗುವುದು. ಸಭೆಯಲ್ಲಿ ಸಾರ್ವಜನಿಕರು ತಿಳಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷೆ ವಿ. ವಿಜಯಲಲಿತ, ಉಪಾಧ್ಯಕ್ಷ ಮೋಹನ್ ಬಾಬು, ಸದಸ್ಯರಾದ ಕೆ. ಎಲ್. ರಾಜೇಂದ್ರ, ಎಸ್. ಆರ್. ಶಿವಶಂಕರ್, ಎಸ್. ಟಿ. ನಾರಾಯಣಸ್ವಾಮಿ, ಫರೀದಾಬೇಗಂ, ನಾಗರಾಜ್, ನೀರು ಮತ್ತು ನೖರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಮತ್ತು ನೋಡಲ್ ಅಧಿಕಾರಿ ಶ್ರಾವಣಿ, ಕೃಷಿ ಇಲಾಖೆಯ ಅಧಿಕಾರಿ ರಘು ಉಪಸ್ಥಿತರಿದ್ದರು.