ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಸಂಚಾಲಕ ಫಾ|ಸ್ಟ್ಯಾನಿ ತಾವ್ರೊರವರ ಅಮೃತ ಮಹೋತ್ಸವ ಆಚರಣೆ


ಕುಂದಾಪುರ,20: ಸೈಂಟ್ ಮೇರಿಸ್ ಮತ್ತು ಹೋಲಿ ರೋಜರಿ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರ ಜನ್ಮ ದಿನದ 75 ವರ್ಷಗಳ ಅಮೃತ ಮಹೋತ್ಸವವನ್ನು ಆ.19 ರಂದು ಸಂಭ್ರಮದಿಂದ ಸೈಂಟ್ ಮೇರಿಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಪುಜ್ಯನೀಯ ಸಂಚಾಲಕರು ಕೇಕ್ಅನ್ನು ಕತ್ತರಿಸಿ ಸಿಹಿಯನ್ನು ಹಂಚಿಕೊಂಡರು. ಪೂಜ್ಯರ ಬಗ್ಗೆ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಅಶ್ವಿನ್ ಅರಾನ್ನಾರವರು “ಅವರು 75ರ ಬದಲಾಗಿ ಅವರಿಗೆ 25 ವರ್ಷದ ಯುವಕರನ್ನು ನಾಚಿಸುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಹಾಗೂ ಅವರನ್ನು ನೋಡುವಾಗ ಗಂಭೀರವಾದ ಮುಖಭಾವವಿದ್ದರೂ ಕೂಡ ಅವರು ಮೃದುವಾದ ಸ್ವಾಭಾವದವರು ಹಾಗೂ ಬೇರೆಯವರ ನೋವು ನಲಿವುಗಳ ಬಗ್ಗೆ ತಿಳಿದವರು ದೊಡ್ಡ ದೊಡ್ಡ ಅಧಿಕಾರ ಹೊಂದಿದರೂ ಕೂಡ ಅವರು ಅದನ್ನು ತೋರಿಸದೆ, ಸಂಬಂಧಗಳನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸುವ ಇವರು ತುಂಬಾ ಸರಳ ವ್ಯಕ್ತಿಯಾಗಿದ್ದು, ನಾವು ಇವರನ್ನು ಆದರ್ಶವನ್ನಾಗಿಸಿಕೊಂಡು, ನಮ್ಮಲ್ಲಿ ಅವರ ಒಳ್ಳೆಯ ಗುಣವನ್ನು ಬೇಳಸಿಕೊಳ್ಳಬೇಕು’ ಎಂದು ಸಂದೇಶವನ್ನು ನೀಡಿದರು.

ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಕನ್ನಡ “ಉಪನ್ಯಾಸಕರಾದ ನಾಗರಾಜ್ ಶೆಟ್ಟಿಯವರು ಪೂಜ್ಯರು ಆಡುಮಟ್ಟದ ಸೊಪ್ಪಿಲ್ಲ ಹಾಗೆಯೇ ಅವರ ಅನುಭವವು ವಿಶಾಲವಗಿದೆ” ಎಂದು ತಿಳಿಸಿದರು. ಸಂಸ್ಥೆಯ ಎಲ್ಲಾ ಮುಖ್ಯ ಶಿಕ್ಷಕರು ಸಂಚಾಲಕರನ್ನು ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯತು.ಪೂಜ್ಯರು ವಿದ್ಯಾ ಸಂಸ್ಥೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹೂಗುಚ್ಚವನ್ನು ನೀಡಿ ಅಭಿನಂದಿಸಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎಲ್ಲೆಡೆ ಸಾರಬೇಕು’ ಎಂದು ಶುಭ ಹರೈಸಿದರು. ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಡೊರ ಸುವಾರಿಸ್ ಸ್ವಾಗತ ಕೋರಿದರು. ಹೋಲಿ ರೋಜರಿ ಶಾಲೆಯ ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೇರೋ ಧನ್ಯವಾದ ಸಮರ್ಪಿಸಿದರು. ಸೈಂಟ್ ಮೇರಿಸ್ ಪ್ರೌಢ ಶಾಲೆಯ ಪದವೀಧರ ಸಹ ಶಿಕ್ಷಕ ಶ್ರೀಯುತ ಚಂದ್ರ ಶೇಖರ್ ಬಿಜಾಡಿ ಕಾರ್ಯಕ್ರಮ ನಿರೂಪಿಸಿದರು.